ಸರಣಿ

ಎಲ್ಲರೂ ಇಷ್ಟ ಪಡುವ ವ್ಯಕ್ತಿ ನೀವಾಗಬೇಕೆ..? ಹೀಗೆ ಮಾಡಿ

ನಗುವೆಂಬ ಕಲೆ ಬಲ್ಲವರಾಗಬೇಕೆ.? ಪಾಲಿಸಿ ಈ POLICY 

ನಗು ಮಾನವನ ಸಹಜ ಗುಣ. ನಗುವಿಗೆ ಯಾವುದೇ ಭಾಷೆಯಿಲ್ಲ. ನಗುವದು ಸಹಜ ಧರ್ಮ ನಗಿಸುವದು ಪರರಧರ್ಮ ಎಂದು ಮಂಕು ತಿಮ್ಮನ ಕಗ್ಗದಲ್ಲಿ ಡಿವಿಜಿಯವರು ನಗುವಿನ ಬಗ್ಗೆ ಹೇಳಿದ ಮಾತು ತುಂಬಾ ಸೂಕ್ತವಾದದು.

ನಗು ಎಷ್ಟೊಂದು ಆರೋಗ್ಯದಾಯಕ ಎನ್ನುವದು ಸರ್ವವಿಧಿತ. ಆದರೆ ಇಂದಿನ ಒತ್ತಡದ ಬದುಕಿನಲ್ಲಿ ನಗಲು ಪುರುಸೊತ್ತಿಲ್ಲದ ಹಾಗಾಗಿದೆ.
ನಗುವಿನ ಮಹತ್ವ ತಿಳಿದ ಅನೇಕರು ಅದನ್ನೇ ಕ್ಯಾಶ್ ಮಾಡಿಕೊಳ್ಳುವ ಪರಿಯನ್ನು ನಾವು ನೀವೆಲ್ಲ ಲಾಫಿಂಗ್ ಪ್ರೋಗ್ರಾಮ್ಸಗಳಲ್ಲಿ ನೋಡುತ್ತಿದ್ದೇವೆ. ಇತ್ತೀಚಿಗೆ ಲಾಫಿಂಗ್ ಕ್ಲಬ್ಬುಗಳ ಸಂಖ್ಯೆಯು  ಹೆಚ್ಚುತ್ತಿದೆ.

smile means speak more in less energy ಅಂತ ಬಲ್ಲವರು ಹೇಳುತ್ತಾರೆ. ನಗುವಿಗೆ ನಾವು ಖರ್ಚು ಮಾಡಬೇಕಾದದ್ದು ಏನೂ ಇಲ್ಲ. ಮುಖದ ಮೇಲೆ ಮಂದಹಾಸವಿದ್ದರೆ ಸಾಕು. ನಮಗಾಗುವ ಕೆಲಸ ಕಾರ್ಯಗಳು ಸಲೀಸಾಗುತ್ತವೆ. ಪರಿಚಿತರನ್ನು ಹಿತೈಷಿಗಳನ್ನು ಕಂಡಾಗ ಮುಖ ಗಂಟಿಕ್ಕಿಕೊಂಡು ಮಾತನಾಡದೆ, ಕಿರುನಗೆಯಿಂದ ಹಾಯ್ ಹಲೋ ಅಂತ ಟ್ರೀಟ್ ಮಾುಡಿದರೆ ಅದರಿಂದ  ನಿಮ್ಮ ಭಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವದು ಗ್ಯಾರಂಟಿ.
ಸ್ನೇಹದ ಸಂಕೇತವಾಗಿರುವ ನಗೆಯನ್ನು ಬಳಿಸಿ, ಕಠಿಣ ಪರಿಸ್ಥಿತಿಗಳನ್ನು ¸ ತಿಳಗೊಳಿಸಬಹುದು. ನಗುವದು ಒಂದು ಕಲೆ.  ನೀವೂ ಈ ಕಲೆ ಬಲ್ಲವರಾಗಬೇಕೆ..?
ಹಾಗಾದರೆ ಪಾಲಿಸಿ ಈ policy.

  • ಎಲ್ಲರನ್ನೂ ಕಿರುನಗೆಯಿಂದ ಮಾತನಾಡಿಸಿ. 
  • * ನಿಮ್ಮ ನಗುವಲ್ಲಿ ಜೀವವಿರಲಿ. * ನಗುವಾಗ ನಿಮ್ಮ ಕಂಗಳಲ್ಲಿ ಹೊಳಪಿರಲಿ. * ಸಂತಸದ ಸಂದರ್ಭದಲ್ಲಿ ಯಾವುದೇ ಮುಜುಗರವಿಲ್ಲದೇ ಜೋರಾಗಿ ನಕ್ಕು ಆನಂದ ಪಡಿ. * ಮನೆಗೆ ಬಂದ ಅತಿಥಿ, ಗೆಳೆಯರನ್ನು ಮುಗುಳ್ನಗುತ್ತಾ ಸ್ವಾಗತಿಸಿ.
    * ಕೋಪ ತಾಪ ದ್ವೇಷ ಅಸೂಯೆಗಳನ್ನು ಮರೆತು ನಗಿ. * ಸಭೆ ಸಮಾರಂಭಗಳಲ್ಲಿ ಔತಣಕೂಟಗಳಲ್ಲಿ ಮಂದಹಾಸ ಬೀರಿದರೆ ಸಾಕು.* ಕುಟುಂಬದ ಸದಸ್ಯರೊಂದಿಗೆ,ಆಪ್ತರೊಂದಿಗೆ ಮುಕ್ತವಾಗಿ ನಕ್ಕು ನಲಿಯಿರಿ. * ನಿಮ್ಮ ಸಮ್ಮತಿ ಮತ್ತು ನಂಬಿಕೆಯನ್ನು ನಗುವಿನ ಮೂಲಕ ತೋರ್ಪಡಿಸಿ.
    ನಗುವದು ಎಷ್ಟು ಮುಖ್ಯವೋ ನಗಬಾರದ ಸಂದರ್ಭದಲ್ಲಿ ನಗುವನ್ನು ನಿಯಂತ್ರಿಸುವದು ಅಷ್ಟೇ ಮುಖ್ಯ. ನಗಬಾರದ ಸಂದರ್ಭದಲ್ಲಿ ನಕ್ಕರೆ ಅಸಭ್ಯತೆ ಎನಿಸಿಕೊಳ್ಳುತ್ತದೆ.
  • ಈ ಕೆಳಗಿನ ಸಂದರ್ಭದಲ್ಲಿ ನಗಬೇಡಿ.
    * ನಿಮ್ಮ ಪಕ್ಕದವರು ತೊದರೆಯಲ್ಲಿದ್ದಾಗ. * ಇತರರು ಗಂಭೀರವಾದ ಚರ್ಚೆಯಲ್ಲಿ ತೊಡಗಿದ್ದಾಗ. * ಸಭೆ ಸಮಾರಂಭಗಳಲ್ಲಿ ಅತಿಥಿಗಳು ಮಾತನಾಡುವಾಗ. * ಇತರರು ಜಗಳಾಡುವಾಗ. * ಎದುರಿನವರು ಕೆಲಸದಲ್ಲಿ ತೊಡಗಿರುವಾಗ ನಗುವದು ಮತ್ತು ನಗುವದನ್ನು ನಿಯಂತ್ರಿಸುವದು ಸನ್ನಡತೆಯ ಪ್ರತೀಕವಾಗಿದೆ.
  • ಸದಾ ಹಸನ್ಮುಖರಾಗಿ ಸಂದರ್ಭೋಚಿತವಾಗಿ ಇತರರನ್ನು ನಗಿಸುತ್ತಾ ಬಾಳುವ ವ್ಯಕ್ತಿಯನ್ನು ಎಲ್ಲರೂ ಇಷ್ಟ ಪಡುತ್ತಾರೆ. ಎಲ್ಲರೂ ಇಷ್ಟ ಪಡುವ ವ್ಯಕ್ತಿ ನೀನಾಗ ಬೇಕೆ..? ಹಾಗಾದರೆ ನಗು ನೀ ನಗು.
  • ಜಯಶ್ರೀ.ಜೆ. ಅಬ್ಬಿಗೇರಿ, ಲೇಖಕಿ

    -ಜಯಶ್ರೀ ಅಬ್ಬಿಗೇರಿ.
    ಸರಕಾರಿ ಪದವಿ ಪೂರ್ವ ಕಾಲೇಜು ಕಟಕೋಳ.
    ತಾ: ರಾಮದುರ್ಗ ಜಿ: ಬೆಳಗಾವಿ.
    9449234142.

 

Related Articles

Leave a Reply

Your email address will not be published. Required fields are marked *

Back to top button