ಗೋಡ್ಸೆಯನ್ನು ಅರ್ಜುನನಿಗೆ ಹೋಲಿಸಿ ಗಾಂಧಿ ಹತ್ಯೆ ಸಮರ್ಥಿಸಿದ ಹಿಂದೂ ಮಹಾಸಭಾ ರಾಜ್ಯದ್ಯಕ್ಷ!
ಮಂಗಳೂರು: ಭೀಷ್ಮನ ಕೊಂದ ಅರ್ಜುನ್ ತನ್ನ ತಾತನನ್ನು ಕೊಂದಿದ್ದಕ್ಕೆ ವ್ಯಥೆ ಪಡುವುದಿಲ್ಲ. ಬದಲಾಗಿ ಅಧರ್ಮದ ಹಾದಿಯಲ್ಲಿದ್ದ ಭೀಷ್ಮನನ್ನು ಕೊಂದೆ ಎಂದು ಸಮರ್ಥಿಸಿಕೊಳ್ಳುತ್ತಾನೆ. ಅರ್ಜುನ ಭೀಷ್ಮನನ್ನು ಕೊಂದಿದ್ದಕ್ಕೇನೆ ಮಹಾಭಾರತ ಅಂತ್ಯವಾಗುತ್ತದೆ. ಅಂತೆಯೇ ಗಾಂಧೀಜಿ ಅವರನ್ನು ಗೋಡ್ಸೆ ಹತ್ಯೆ ಮಾಡಿದ್ದಾರೆ. ಗಾಂಧೀಜಿ ಅವರು ಪಾಕಿಸ್ತಾನಕ್ಕೆ ಭಾರತದಿಂದ ಇನ್ನೂ ಹೆಚ್ಚಿನ ಹಣ ನೀಡುವುದು. ಮತ್ತಷ್ಟು ದೇಶ ವಿಭಜನೆಯ ಚಿಂತನೆ ನಡೆಸಿದ್ದರು. ಆ ಕಾರಣಕ್ಕೆ ದೇಶ ಮತ್ತಷ್ಟು ತುಂಡಾಗುವುದನ್ನು ತಪ್ಪಿಸಲು ಗಾಂಧೀಜಿ ಅವರನ್ನು ಹತ್ಯೆ ಮಾಡಿದೆ ಅಂತ ಗೋಡ್ಸೆ ಹೇಳಿದ್ದಾರೆ. ಅದನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಹಿಂದೂ ಮಹಾಸಭಾದ ರಾಜ್ಯದ್ಯಕ್ಷ ನಾ. ಸುಬ್ರಹ್ಮಣ್ಯ ರಾಜು ಹೇಳಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯನ್ನು ನಡೆಸಿದ ಹಿಂದೂ ಮಹಾಸಭಾದ ರಾಜ್ಯದ್ಯಕ್ಷ ನಾ.ಸುಬ್ರಮಣ್ಯ ರಾಜು ಮಹಾತ್ಮ ಗಾಂಧೀಜಿ ಅವರ ಬಗ್ಗೆ ಗೌರವಿದೆ ಎಂದು ಹೇಳುತ್ತಲೇ ಗಾಂಧೀಜಿ ಹತ್ಯೆಗೈದ ಗೋಡ್ಸೆ ಪರ ಸಮರ್ಥನೆ ಮಾಡಿಕೊಂಡಿದ್ದಾರೆ. ನಾ.ಸುಬ್ರಮಣ್ಯ ರಾಜು ಅವರ ಈ ವಿವಾದಾತ್ಮಕ ಹೇಳಿಕೆ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.