ದಿನಕ್ಕೊಂದು ಕಥೆ
ಗಣಪತಿಗೆ ಇಲಿ ವಾಹನ ಏಕೆ.? ಹೇಗೆ.?
ಗಜಮುಖಾಸುರ ಎಂಬ ರಾಕ್ಷಸ. ಅವನಿಗೆ ಶಿವನ ಮೇಲೆ ತುಂಬಾ ಭಕ್ತಿ. ಶಿವನನ್ನು ಧ್ಯಾನಿಸಿ ಅವನಿಂದ ವರವನ್ನು ಪಡೆಯುತ್ತಾನೆ. ಯಾವುದೇ ದೇವರಿಂದಾಗಲೀ, ಮನುಷ್ಯನಿಂದಾಗಲೀ ನನಗೆ ಸಾವು ಬರಬಾರದು ಎಂದು ಶಿವ ವರವನ್ನು ಕೊಡುತ್ತಾನೆ. ಶಿವ ಅವನಿಗೆ ವರ ಕೊಟ್ಟು ಆ ವರವನ್ನು ದುರುಪಯೋಗ ಮಾಡದಂತೆ ಎಚ್ಚರಿಕೆಯನ್ನೂ ನೀಡಿರುತ್ತಾನೆ.
ಆದರೆ ರಾಕ್ಷಸ ತನಗಿರುವ ಶಕ್ತಿಯಿಂದ ಎಲ್ಲರಿಗೂ ಹಿಂಸೆ ನೀಡುತ್ತಿರುತ್ತಾನೆ. ರಾಕ್ಷಸನ ದರ್ಪವನ್ನು ಹೇಗಾದರೂ ಮಾಡಿ ನಿಗ್ರಹಿಸಬೇಕೆಂದು ತೀರ್ಮಾನಿಸಿ ಶಿವನು ಗಣೇಶನನ್ನು ಕಳುಹಿಸುತ್ತಾನೆ. ಗಣೇಶ ರಾಕ್ಷಸನನ್ನೇ ಇಲಿ ಮಾಡಿಕೊಂಡು ವಾಹನವಾಗಿ ಉಪಯೋಗಿಸುತ್ತಾನೆ.
ಹೀಗೆ ಇಲಿ ಗಣೇಶನ ವಾಹನವಾಗುತ್ತದೆ. ಎಂಬುದು ಒಂದು ಕಥೆಯಾದರೆ,
ಗಣೇಶ ಪುರಾಣದ ಪ್ರಕಾರ ಇಂದ್ರಲೋಕದಲ್ಲಿ ಕೌಂಚ್ರ ಎನ್ನುವ ಗಂಧರ್ವ ಇರುತ್ತಾನೆ. ಅವನು ಒಳ್ಳೆಯ ಹಾಡುಗಾರನಾಗಿದ್ದ. ಒಂದು ದಿನ ಇಂದ್ರನ ಸಭೆಯಲ್ಲಿ ಗೊತ್ತಿಲ್ಲದೆ ವಾಮದೇವ ಎಂಬ ಮುನಿಯ ಹೆಬ್ಬೆರಳನ್ನು ತುಳಿಯುತ್ತಾನೆ. ಇದರಿಂದ ಸಿಟ್ಟುಗೊಂಡ ವಾಮದೇವ ಇವನು ಬೇಕಂತಲೇ ಹೀಗೆ ಮಾಡಿದ್ದಾನೆ ಎಂದುಕೊಂಡು “ಇಲಿ” ಆಗು ಎಂದು ಶಾಪ ನೀಡುತ್ತಾನೆ.
ಕ್ರೌಂಚ ವಾಮದೇವನ ಕಾಲಿಗೆ ಬಿದ್ದು ಶಾಪ ಹಿಂತೆಗೆದುಕೊಳ್ಳುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ಒಮ್ಮೆ ಕೊಟ್ಟ ಶಾಪವನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ. ಆದರೆ, ಮುಂದೆ ನೀನು ಗಣೇಶನನ್ನು ಭೇಟಿ ಮಾಡಿ ಅವನ ವಾಹನ ಆದಾಗ ನಿನಗೆ ಮುಕ್ತಿ ಸಿಗುತ್ತದೆ. ಅವನ ಜೊತೆ ನಿನಗೂ ಭಕ್ತರು ಪೂಜೆ ಸಲ್ಲಿಸುತ್ತಾರೆ. ಎನ್ನುತ್ತಾನೆ.
ಕ್ರೌಂಚ ಇಲಿಯಾಗಿ ಭೂಮಿ ಮೇಲೆ ಜನ್ಮತಾಳುತ್ತಾನೆ. ಆದರೆ, ಅವನು ಬೆಟ್ಟದಷ್ಟು ದೊಡ್ಡದಾಗಿರುತ್ತಾನೆ. ಆಗ ಪರಾಶರ ಮುನಿ ಆಶ್ರಮದಲ್ಲಿ ಗಜಾನನ ಅವತಾರದಲ್ಲಿದ್ದ ಗಣೇಶ ಇಲಿಯನ್ನು ದೊಡ್ಡ ಹಗ್ಗದಿಂದ ಕಟ್ಟಿ ಎಳೆದಾಗ ಅವನು ಗಣೇಶನ ಕಾಲಿಗೆ ಕೆಳಗೆ ಬೀಳುತ್ತಾನೆ. ಗಣೇಶನಲ್ಲಿ ಕ್ಷಮೆ ಕೇಳಿ ಕ್ರೌಂಚ ಗಣೇಶನ ವಾಹನ ಆಗುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.