ಶಹಾಪುರ ಗಣೇಶ ನಗರ ಸೀಲ್ ಡೌನ್ ಯಾಕೆ ಗೊತ್ತಾ.?
ನಗರದ ಗಣೇಶ ನಗರ ಫುಲ್ ಲಾಕ್ ಮನೆ ಮನೆಗೆ ದಿನಸಿ, ತರಕಾರಿ ಪೂರೈಕೆ
ನಗರದಲ್ಲಿ ಒಟ್ಟು 17 ಸೆಕ್ಟರ್, ಮೊದಲ ಸೆಕ್ಟರ್ ಗಣೇಶ ನಗರ
ಪ್ರಾಯೋಗಿಕವಾಗಿ ಸೋಮವಾರದಿಂದ ಗಣೇಶ ನಗರದಿಂದ ಚಾಲನೆ
ಶಹಾಪುರಃ ಲಾಕ್ ಡೌನ್ ಇನ್ನಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಅಲ್ಲದೆ ಮುಂಜಾಗೃತವಾಗಿ ಕೊರೊನಾ ಪ್ರಕರಣಗಳು ಕಂಡು ಬಂದಲ್ಲಿ ಆಯಾ ಏರಿಯಾ ಸಮರ್ಪಕವಾಗಿ ಗುರುತಿಸಿ ಕ್ರಮಕೈಗೊಳ್ಳಲು ಅನುಕೂಲವಾಗುವ ಹಿನ್ನೆಲೆಯಲ್ಲಿ ನಗರದ 31 ವಾರ್ಡ್ಗಳನ್ನು 17 ಸೆಕ್ಟ್ರ್ಗಳಾಗಿ ವಿಂಗಡಿಸಿಲಾಗಿದ್ದು, ಆ ಯಾ ಸೆಕ್ಟರ್ಗಳಲ್ಲಿ 800 ರಿಂದ 900 ಕುಟುಂಬಗಳನ್ನಜು ಗುರುತಿಸಲಾಗಿದೆ.
ಆಯಾ ಸೆಕ್ಟರ್ಗಳಿಗೆ ದಿನಸಿ ಅಂಗಡಿ, ತರಕಾರಿ, ಹಾಲು, ಹಣ್ಣುಗಳನ್ನು ಮನೆ ಮನೆಗೆ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆಯಾ ಸೆಕ್ಟರ್ಗೆ ಸಂಬಂಧಿಸಿದ ದಿನಸಿ ಅಂಗಡಿ ಮತ್ತು ತರಕಾರಿ ಹಾಗೂ ಹಣ್ಣಿನ ಅಂಗಡಿಗಳ ಮೊಬೈಲ್ ನಂಬರ ನೀಡಲಾಗಿದೆ. ಬೆಳಗ್ಗೆ ನಿಗದಿ ಪಡಿಸಿದ ಸಮಯದೊಳಗೆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಲ್ಲಿ ಮನೆಗೆ ದಿನಸಿ, ತರಕಾರಿ ಮತ್ತು ಹಣ್ನುಗಳನ್ನು ತಂದು ಕೊಡಲಿದ್ದಾರೆ. ಸಾರ್ವಜನಿಕರು ಯಾರು ಹೊರಗೆ ಬರುವಂತಿಲ್ಲ.
ಆ ನಿಟ್ಟಿಲ್ಲಿ ಕ್ರಮಕೈಗೊಳ್ಳಲಾಗುತ್ತಿದ್ದು, ಮೊದಲ ಬಾರಿಗೆ ಪ್ರಾಯೋಗಿಕವಾಗಿ ಸೆಕ್ಟರ್ ನಂ. 1 ಗಣೇಶ ನಗರದಲ್ಲಿ ಸೋಮವಾರ ಚಾಲನೆ ನೀಡಲಾಗುತ್ತಿದೆ ಎಂದು ಪೌರಾಯುಕ್ತ ಬಸವರಾಜ ಶಿವಪೂಜೆ ತಿಳಿಸಿದರು.
ಜಿಲ್ಲಾಧಿಕಾರಿ ಮಾರ್ಗದರ್ಶನದಂತೆ ಮನೆ ಮನೆಗೆ ತರಕಾರಿ, ದಿನಸಿ, ಹಾಲು, ಹಣ್ಣುಗಳನ್ನು ವಿತರಿಸಲಾಗುತ್ತಿದ್ದು, ಸೋಮವಾರ ಮೊದಲ ಸೆಕ್ಟ್ರರ್ ಗಣೇಶ ನಗದಲ್ಲಿ ಚಾಲನೆ ನೀಡಲಾಗುತ್ತಿದೆ. ಹೀಗಾಗಿ ಗಣೇಶ ನಗರದ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದ್ದು, ಕೇವಲ ಒಂದೇ ಮಾರ್ಗ ಮಾತ್ರ ಬಿಡಲಾಗಿದೆ. ಮನೆಯಿಂದ ಯಾರೊಬ್ಬರು ಹೊರಗಡೆ ಬರಬಾರದು. ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದ್ದು, ತಮ್ಮ ಸೇವೆಯಲ್ಲಿ ನಾವೆಲ್ಲ ಶ್ರಮವಹಿಸುತ್ತಿದ್ದು, ನಾಗರಿಕರ ಸಹಾಯ ಸಹಕಾರ ಅಗತ್ಯ.
-ಬಸವರಾಜ ಶಿವಪೂಜೆ. ಪೌರಾಯುಕ್ತರು. ಶಹಾಪುರ.