
ಗಣೇಶ ವಿಸರ್ಜನೆ ಸಮಾರಂಭಃ ಬೆಳಗ್ಗೆ ಅಭಿಷೇಕ ಪೂಜೆ
ಅನ್ನಸಂತರ್ಪಣೆ, ಭಕ್ತಾಧಿಗಳಿಂದ ನೈವೇದ್ಯ ಸಮರ್ಪಣೆ
yadgiri, ಶಹಾಪುರಃ ದಿಗ್ಗಿಬೇಸ್ ರಸ್ತೆಯ ಇಮಮ್ ಖಾಸಿಂ ಮಸೀದಿ ಬಳಿ ಗಣೇಶ ಯುವ ಮಂಡಳಿವತಿಯಿಂದ ಈ ಬಾರಿ ಪ್ರತಿಷ್ಠಾಪನೆ ಮಾಡಲಾದ ಗಣೇಶ ವಿಸರ್ಜನೆ ಕಾರ್ಯಕ್ರಮ ಅಂಗವಾಗಿ ರವಿವಾರ ಬೆಳಗ್ಗೆ ಭಕ್ತಾಧಿಗಳು ನೈವೇದ್ಯ ಸಮರ್ಪಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಗಣೇಶ ಮಂಡಳಿಯಿಂದ ಬೆಳಗ್ಗೆಯಿಂದಲೇ ಗಣೇಶ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ನಂತರ ಮದ್ಯಾಹ್ನ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಭಕ್ತಾಧಿಗಳು ಆಗಮಿಸಿ ಗಣೇಶನ ದರ್ಶನ ಪಡೆದು, ಪ್ರಸಾದ ಸೇವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಫೈಮುದ್ದೀನ್ ಖಾದ್ರಿ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಮಲ್ಲಪ್ಪ ಮಣಿಗಿರಿ, ವಕೀಲರಾದ ಮಲ್ಲಿಕಾರ್ಜುನ ಹಯ್ಯಾಳಕರ್ ಮತ್ತು ಶರಣರಾಜ ಮುದ್ನೂರ, ಅಂಬಣ್ಣ ನಾಯ್ಕೋಡಿ ಸೇರಿದಂತೆ ಶರಣಪ್ಪ ಮಡ್ನಾಳ, ಮರೆಪ್ಪ ನಾಯ್ಕೋಡಿ, ಅಯ್ಯಪ್ಪ ಮಡ್ನಾಳ, ಯಲ್ಲಪ್ಪ ಮಡ್ನಾಳ, ಶಿವು ಶಿರವಾಳಕರ್ ಇದ್ದರು.
ಮಹಿಳೆಯರು, ಮಕ್ಕಳು ವಿಸರ್ಜನಾ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ ಸಂಜೆ 6 ಗಂಟೆಗೆ ಪ್ರತಿಷ್ಠಾಪಿತ ಸ್ಥಳದಿಂದ ಹೊರ ಮೆರವಣಿಗೆ ಫಕೀರೇಶ್ವರ ಮಠ, ಜೀವ್ಹೇಶ್ವರ ಕಲ್ಯಾಣ ಮಂಟಪ, ಹಳೇ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮೋಚಿಗಡ್ಡಾ, ಗಾಂಧಿ ಚೌಕ್‍ದಿಂದ ದಿಗ್ಗಿಬೇಸ್ ಮೂಲಕ ನಾಗರ ಕೆರೆಗೆ ತೆರಳಿತು. ಅಂತಿಮವಾಗಿ ನಾಗರ ಕೆರೆಯಲ್ಲಿ ವಿಸರ್ಜನಾ ಕಾರ್ಯ ಪೂಜಾ ವಿಧಿವಿಧಾನ ಮೂಲಕ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ.