ಪ್ರಮುಖ ಸುದ್ದಿ
ಬಸ್ ನಿಲ್ದಾಣದ ಬಳಿಯೇ ನಡೆಯಿತು ಗ್ಯಾಂಗ್ ವಾರ್! ಇದು ಕರ್ನಾಟಕವೇ?
ದಕ್ಷಿಣ ಕನ್ನಡ : ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಗ್ರಾಮದ ಬಸ್ ನಿಲ್ದಾಣದ ಸಮೀಪ ಗ್ಯಾಂಗ್ ವಾರ್ ನಡೆದಿದೆ. ಎಂಟು ಜನರ ಗುಂಪೊಂದು ಐದು ಜನರ ಗುಂಪಿನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಮಚ್ಚು, ಲಾಂಗುಗಳನ್ನು ಹಿಡಿದು ನಡುಬೀದಿಯಲ್ಲೇ ಕಾಳಗ ನಡೆಸಿದೆ. ನಡುರಸ್ತೆಯಲ್ಲೇ ನಡೆದ ಈ ಗ್ಯಾಂಗ್ ವಾರ್ ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಬಸ್ ನಿಲ್ದಾಣ ಪ್ರದೇಶದಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಗ್ಯಾಂಗ್ ವಾರ್ ನಲ್ಲಿ ಮೂವರು ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸ್ ನಿಲ್ದಾಣದ ಬಳಿಯೇ ಯಾರ ಭಯವೂ ಇಲ್ಲದೆ ಸಿನೆಮಾ ಸ್ಟೈಲ್ ನಲ್ಲಿ ಮಚ್ಚು ಲಾಂಗು ಹಿಡಿದು ಗ್ಯಾಂಗ್ ವಾರ್ ನಡೆಸಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.