ಪ್ರಮುಖ ಸುದ್ದಿ
ಗ್ಯಾಂಗ್ ವಾರ್: ಇಬ್ಬರ ಹತ್ಯೆ, ಮೂವರ ಸ್ಥಿತಿ ಗಂಭೀರ
ಮಂಗಳೂರು: ನಿನ್ನೆ ತಡರಾತ್ರಿ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ಐವರನ್ನು ಇನೋವಾ ಕಾರಿನಲ್ಲಿ ಬೆನ್ನಟ್ಟಿದ ಮತ್ತೊಂದು ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಪರಂಗಿಪೇಟೆಯಲ್ಲಿ ನಡೆದಿದೆ. ಪರಿಣಾಮ ರಿಜಾಜ್ ಅಲಿಯಾಸ ಜಿಯಾ, ಕಣ್ಣೂರು ಫಯಾಜ್ ಎಂಬುವರು ಸಾವಿಗೀಡಾಗಿದ್ದಾರೆ. ಫಜಲ್, ಮುಸ್ತಾಕ್, ಹಮೀಜ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಕಣ್ಣೂರಿನ ಸೆಲೂನ್ ಒಂದರಲ್ಲಿ
2014 ರ ಅಕ್ಟೋಬರ್ 31 ರಂದು ಇಜಾಜ್ ಎಂಬುವನ ಹತ್ಯೆ ನಡೆದಿತ್ತು. ಇಂದು ಹತ್ಯೆಯಾಗಿರುವ ರಿಜಾಜ್, ಫಯಾಜ್ ಸೇರಿದಂತೆ ಮತ್ತಿತರರು ಇಜಾಜ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದರು. ಪರಿಣಾಮ ಇಜಾಜ್ ಕೊಲೆಯ ಪ್ರತಿಕಾರವಾಗಿ ಇಂದು ಇಬ್ಬರ ಹತ್ಯೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದಾಗಿ ಪ್ರಕರಣದ ನಿಜಾಂಶ ಬಯಲಾಗಬೇಕಿದೆ.