ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ರಾಜ್ಯಧ್ಯಕ್ಷರಿಗೆ ಸನ್ಮಾನ
yadgiri, ಶಹಾಪುರಃ ನೂತನವಾಗಿ ಕರ್ನಾಟಕ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ರಾಜ್ಯಧ್ಯಕ್ಷರಾಗಿ ಆಯ್ಕೆಯಾದ ಶಿವರುದ್ರಗೌಡ ಎಸ್.ಬಿರಾದಾರ ಸೇರಿದಂತೆ ಇತರೆ ಒಕ್ಕೂಟದ ಪ್ರತಿನಿಧಿಗಳನ್ನು ಇಲ್ಲಿನ ಜೆಸ್ಕಾಂ ಶಾಖೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನೂತನ ರಾಜ್ಯಧ್ಯಕ್ಷ ಸೇರಿದಂತೆ ಇತರರನ್ನು ಸನ್ಮಾನಿಸಿ ಮಾತನಾಡಿದ ಎಇಇ ಶಾಂತಪ್ಪ ಪೂಜಾರಿ, ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ವಿದ್ಯುತ್ ಪ್ರತಿನಿಧಿಗಳ ಸಮಸ್ಯೆಗಳ ಕುರಿತು ಬೆಳಕು ಚಲ್ಲಬೇಕು. ಅವರ ಕಷ್ಟ ಸುಖದೊಂದಿಗೆ ಬೆರೆತು ಒಳಿತನ್ನು ಮಾಡುವ ಮೂಲಕ ಕರ್ತವ್ಯ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ಜೆಸ್ಕಾಂ ಉಪಾಧ್ಯಕ್ಷ ಹಯ್ಯಾಳಪ್ಪ ನಾಟೇಕಾರ ಸೇರಿದಂತೆ ಇತರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಲೆಕ್ಕಾಧಿಕಾರಿ ಮಹ್ಮದ್ ನಾಜುದ್ದೀನ್, ಬಸವರಾಜ ಮಾಲಿ ಪಾಟೀಲ್, ಒಕ್ಕೂಟದ ಕಾರ್ಯದರ್ಶಿ ಇಕ್ಬಾಲ್ ಲೋಹಾರಿ, ಬನ್ನಯ್ಯಸ್ವಾಮಿ ಹುಗ್ಗೆಳ್ಳಿಮಠ ಮತ್ತು ಪ್ರತಿನಿಧಿಗಳು ಜೆಸ್ಕಾಂ ನೌಕರ ಬಾಂಧವರು ಉಪಸ್ಥಿತರಿದ್ದರು.