ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಃ ಆರೋಪಿಗಳ ಬಂಧನಕ್ಕೆ ಆಗ್ರಹ
ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆಃ ಆರೋಪಿಗಳ ಬಂಧನಕ್ಕೆ ಆಗ್ರಹ
yadgiri, ಶಹಾಪುರಃ ಕಳೆದ ಐದು ದಿನಗಳ ಹಿಂದೆ ವಿದ್ಯುತ್ ಸರಬರಾಜಿನಲ್ಲಿ ವ್ಯಥೆ ಉಂಟಾದಾಗ ದುರಸ್ತಿಗಾಗಿ ತಾಲೂಕಿನ ಸಗರ ಗ್ರಾಮಕ್ಕೆ ತೆರಳಿ ಕರ್ತವ್ಯ ನಿರ್ವಹಿಸುತ್ತಿರುವಾಗ ವಿನಾಃಕಾರಣ ಗ್ರಾಮದ ಕೆಲವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಕುರಿತು ನಗರ ಪೊಲೀಸ್ ಠಾಣಗೆ ಜೆಸ್ಕಾಂ ನೌಕರರು ದೂರು ಸಲ್ಲಿಸಿದ್ದು, ಇದುವರೆಗೂ ಯಾವುದೇ ಕ್ರಮಕೈಗೊಳ್ಳದ ಕಾರಣ, ಜೆಸ್ಕಾಂ ನೌಕರರು ಇಂದು ಆಕ್ರೋಶಗೊಂಡ ನಗರದ ಜೆಸ್ಕಾಂ ಶಾಖೆ ಮುಂದೆ ಧರಣಿ ನಡೆಸುವ ಮೂಲಕ ನ್ಯಾಯ ದೊರೆಯುವವರೆಗೂ ಕೆಲಸಕ್ಕೆ ಹಾಜರಾಗುವದಿಲ್ಲ. ಕೂಡಲೇ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಬೇಕು. ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ನೌಕರರ ಸಂಘದ ಕಾರ್ಯದರ್ಶಿ ಮಾತನಾಡಿ, ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮೇಲೆ ನಾಲ್ಕಾರು ಜನ ಸೇರಿ ಹಲ್ಲೆ ನಡೆಸಿದ್ದಾರೆ ಅಲ್ಲದೆ ಜೀವ ಭಯ ಹಾಕಿದ್ದು, ನೌಕರರು ಮನುಷ್ಯರಲ್ಲವೇ ಹೇಗೆ ಕೆಲಸ ಮಾಡಲು ಸಾಧ್ಯ. ಹಗಲು ರಾತ್ರಿ ಎನದೆ ಜೆಸ್ಕಾಂ ನೌಕರರು ಸಿಬ್ಬಂದಿ ಕೊರತೆ ನಡುವೆ ಎಲ್ಲವೂ ಸರಿದೂಗಿಸಿಕೊಂಡು ಹೋಗುತ್ತೇವೆ.
ಇಂತಹ ಸಂದರ್ಭದಲ್ಲಿ ನಮ್ಮವರ ಮೇಲೆ ಹಲ್ಲೆ ಮಾಡಿದರೂ ಸಹಿಸಿಕೊಳ್ಳುವದು ಹೇಗೆ. ಪ್ರಕರಣ ದಾಖಲಿಸುವಲ್ಲಿ ರಆಝಕೀಯ ಒತ್ತಡಕ್ಕೆ ಮಣಿಯದೆ ಸಮರ್ಪಕ ಕಾನೂನುನಡಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಆರೋಪಿಗಳು ರಾಜಕೀಯವಾಗಿ ಬಲಾಢ್ಯರಾಗಿದ್ದು, ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಕಾರಣ ಜೆಸ್ಕಾಂ ನಮ್ಮ ಮೇಲಧಿಕಾರಿಗಳು ಸಿಬ್ಬಂದಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವದು ಅಪರಾಧ ಕೂಡಲೇ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.