ಪ್ರಮುಖ ಸುದ್ದಿ

ಜೆಸ್ಕಾಂ ಸಿಬ್ಬಂದಿಯಿಂದ ಆಹೋರಾತ್ರಿ ಧರಣಿಗೆ ನಿರ್ಧಾರ.! SP ಅವರು‌ ಸ್ಥಳಕ್ಕೆ ಆಗಮಿಸುವರೆಗೆ ಎದ್ದೇಳಲ್ಲ.!

ಜೆಸ್ಕಾಂ ಸಿಬ್ಬಂದಿಯಿಂದ ಆಹೋರಾತ್ರಿ ಧರಣಿಗೆ ನಿರ್ಧಾರ.!
ಧರಣಿನಿರತ‌ ಬಳಿಗೆ ತೆರಳದ ಜನಪ್ರತಿನಿಧಿಗಳು ನೌಕರರ ಆಕ್ರೋಶ

ಯಾದಗಿರಿ, ಶಹಾಪುರಃ ಜೆಸ್ಕಾಂ ಸಿಬ್ಬಂದಿ ಮೇಲೆ ತಾಲೂಕಿನ ಸಗರ ಗ್ರಾಮದಲ್ಲಿ ನಡೆದ ಹಲ್ಲೆ ಖಂಡಿಸಿ ಮತ್ತು ಆರೋಪಿಗಳ ಮೇಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಜೆಸ್ಕಾಂ ನೌಕರರ ಸಂಘ ಆಹೋ ರಾತ್ರಿ ಧರಣಿ‌ ಕೈಗೊಂಡಿದೆ,‌ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೆ ಧರಣಿ ಕೈಬಿಡಲಾಗುವದಿಲ್ಲ ಎಂದು ಸಂಘದ ಕಾರ್ಯದರ್ಶಿ ಎಕ್ಬಾಲ್ ಲಾಹೋರಿ ವಿನಯವಾಣಿಗೆ ತಿಳಿಸಿದ್ದಾರೆ.

ಜೆಸ್ಕಾಂ ನೌಕರರು ಮನುಷ್ಯರಿದ್ದಾರೆ, ರಾತ್ರಿ ಹಗಲ್ಲೆನ್ನದೆ ಕೆಲಸ ಮಾಡುತ್ತೇವೆ. ವಿದ್ಯುತ್ ಸ್ವಲ್ಪ ತೊಂದರೆಯಾದರೂ ಸಹ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ರಾತ್ರಿ 12, ಬೆಳಗ್ಗೆ 4 ಗಂಟೆ ಸಮಯದ‌ ಪ್ರಜ್ಞೆ ಇಲ್ಲದೆ ಕಾಲ್‌ ಮಾಡಿ ಮನಬಂದಂತೆ ಬೈಯ್ಯುತ್ತಾರೆ ಹೊಲಸು ಶಬ್ಧಗಳನ್ನು ಹಾಡುತ್ತಾರೆ.

ಸಗರ ಗ್ರಾಮ‌ ಒಂದೇ ಅಲ್ಲ ಹಲವಾರು ಗ್ರಾಮಗಳಲ್ಲಿ‌ ಬಾಕಿ ಬಿಲ್‌ ಕೇಳಲು‌ ಹೋದರೂ ಕೆಲ ಸಿಬ್ಬಂದಿ ಮೇಲೆ‌ ಹಲವಡೆ ಹಲ್ಲೆ‌ ಮಾಡಿದ್ದಾರೆ. ಇದೇ ಮೊದಲಲ್ಲ ಸಾಕಷ್ಟು ಹಲ್ಲೆಗಳು ನಡೆದಿವೆ.
ನಾವು ಮನುಷ್ಯರಿದ್ದೇವೆ ನಮಗೂ ಸಂಸಾರವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಗರ ಘಟನೆಯಲ್ಲಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆಯಾಗಿರುವದು ಇದೇ ಮೊದಲಲ್ಲ.‌ ನೌಕರರು ಇಂತಹ ಘಟನೆಗಳಿಂದ ಜರ್ಜರಿತರಾಗಿದ್ದಾರೆ. ಅವರ ಕುಟುಂಬಗಳು ಕೆಲಸಕ್ಕೆ ಹೋಗುವ ವಿದ್ಯುತ್ ಕೆಲಸ‌‌ ಮಾಡುವಾಗ ಹುಷಾರ್ರು ಎಂದು ಹೇಳುವ ಬದಲು ಕರ್ತವ್ಯ ‌ನಿಭಾಯಿಸುವಾಗ ಯಾರ ಜೊತೆನು ಕಿರಿಕಿರಿ ಮಾಡಿಕೊಳ್ಳಬೇಡಿ ಹಂಗೇನಿದ್ರೆ ವಾಪಾಸ್ ಬಂದು ಬಿಡಿ ಅನ್ನುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಹಲ್ಲೆ ನಡೆಸಿದವರ ಮೇಲೆ‌ ಪ್ರಕರಣ ದಾಖಲು‌ ಮಾಡಬೇಕು.‌ ಕೂಡಲೇ ಅವರ ಮೇಲೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಮೂಲಕ ಸಿಬ್ಬಂದಿಗಳಲ್ಲಿ ಧೈರ್ಯ ತುಂಬಬೇಕು ಎಂದು ಮನವಿ ಮಾಡಿದರು.

ಟೈರ್ ಗೆ ಬೆಂಕಿ ಹಚ್ಚಿ‌ ಆಕ್ರೋಶ ವ್ಯಕ್ತಪಡಿಸಿಸ ಜೆಸ್ಕಾಂ ನೌಕರ ಸಿಬ್ದಂದಿ ಕಳೆದ ನಾಲ್ಕು ಗಂಟೆಯಿಂದ ಧರಣಿ‌‌ನಡೆಸುತ್ತಿದ್ದು, ಆಹೋರಾತ್ರಿ‌ ಮುಂದುವರೆಸಲಿದ್ದೇವೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿ ನಮ್ಮ ನೋವು ಆಲಿಸಿ ನ್ಯಾಯ‌ ಒದಗಿಸುವರೆಗೆ ನಾವು ಧರಣಿ ಕೈಬಿಡುವದಿಲ್ಲ ಎಂದು ಧರಣಿನಿರತರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button