ಪ್ರಮುಖ ಸುದ್ದಿ
ಪ್ರವಾಹ : ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಂ.ವೈ.ಪಾಟೀಲ್ ಭೇಟಿ
ಕಲಬುರಗಿ : ಅಫಜಲಪುರ ತಾಲೂಕಿನ ಗಾಣಗಾಪುರ, ಘತ್ತರಗಿ ಗ್ರಾಮಗಳಿಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಮ್ .ವೈ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ಭೇಟಿ ಮಾಡಿ ಆತ್ಮಸ್ಥೈರ್ಯ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾಮಳೆ ಹಿನ್ನೆಲೆ ಅಲ್ಲಿನ ಜಲಾಶಯಗಳು ಭರ್ತಿಯಾಗಿದ್ದು ಭೀಮಾನದಿಗೆ ನೀರು ಹರಿಸಿದ ಪರಿಣಾಮ ಭೀಮಾ ತೀರದಲ್ಲೂ ಪ್ರವಾಹ ಸೃಷ್ಠಿ ಆಗಿದ್ದು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
chinnamalli gram dallu bhima nadi nirinalli ryitar bhumi muludade agive