ಪ್ರಮುಖ ಸುದ್ದಿ
ಮದುವೆ ಆಗುವಂತೆ ಕಿರುಕುಳ : ಮನನೊಂದ ಬಾಲಕಿ ನೇಣಿಗೆ ಶರಣು
ಕಲಬುರಗಿ : ಮದುವೆ ಆಗುವಂತೆ ಪೀಡಿಸುತ್ತಿದ್ದ ಯುವಕನಿಂದ ನೊಂದು ಬಾಲಕಿ ನೇಣಿಗೆ ಶರಣಾದ ಘಟನೆ ತಾಲೂಕಿನ ಪಾಳಾ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಭೀಮು ಹಕ್ಕಿ ಎಂಬ ಯುವಕ ಬಾಲಕಿ ನಿರ್ಮಲಾಗೆ ಮದುವೆ ಆಗುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದನಂತೆ. ಅಂತೆಯೇ ನಿನ್ನೆ ಮದ್ಯಾನ ಬಾಲಕಿಯ ಮನೆಗೆ ತೆರಳಿ ಪೋಷಕರ ಜೊತೆ ಜಗಳ ಮಾಡಿದ್ದನಂತೆ. ಪರಿಣಾಮ ಮನನೊಂದು ಬಾಲಕಿ ನೇಣಿಗೆ ಶರಣಾಗಿದ್ದಾಳೆ.
ಬಾಲಕಿ ನೇಣಿಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಭೀಮು ಹಕ್ಕಿ ನಾಪತ್ತೆಯಾಗಿದ್ದಾನೆ. ಪರಿಣಾಮ ಮೃತ ಬಾಲಕಿಯ ಕುಟುಂಬಸ್ಥರು ಶವವನ್ನು ಜಿಲ್ಲಾಧಿಕಾರಿ ಕಚೇರಿ ಎದುರಿಟ್ಟು ಆರೋಪಿ ಬಂಧನಕ್ಕೆ ಆಗ್ರಹಿಸಿ ಧರಣಿ ನಡಸಿದ್ದಾರೆ. ಸ್ಥಳಕ್ಕೆ ಎಸ್ಪಿ ಶಶಿಕುಮಾರ್ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಧರಣಿ ಕೈಬಿಟ್ಟಿದ್ದಾರೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.