ನಮ್ಮ ಹೋರಾಟಕ್ಕೆ ಜಯ ಸಿಗಲಿದೆ – ಜಿ.ಎಂ.ಸಿದ್ದೇಶ್ವರ
ಸದ್ಯದಲ್ಲಿಯೇ ಒಳ್ಳೆಯ ಸುದ್ದಿ ಸಿಗಲಿದೆ - ಜಿಎಂಸಿ
ನಮ್ಮ ಹೋರಾಟಕ್ಕೆ ಜಯ ಸಿಗಲಿದೆ – ಜಿ.ಎಂ.ಸಿದ್ದೇಶ್ವರ
ಸದ್ಯದಲ್ಲಿಯೇ ಒಳ್ಳೆಯ ಸುದ್ದಿ ಸಿಗಲಿದೆ – ಜಿಎಂಸಿ
ವಿವಿ ಡೆಸ್ಕ್ಃ ರಾಜ್ಯ ಭಾಜಪದಲ್ಲಿ ಭಿನ್ನರ ಬಣವೆಂದು ಗುರುತಿಸಿಕೊಂಡ ಯತ್ನಾಳ್ ಟೀಮ್ ದೆಹಲಿಯಲಿ ಬೀಡು ಬಿಟ್ಟಿದ್ದು, ರಾಜ್ಯ ಅಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಹೈಕಮಾಂಡ ನಾಯಕರ ಜತೆ ಭೇಟಿ ಸಮಾಲೋಚನೆ ನಡೆಸುತ್ತಿದ್ದಾರೆ.
ಈ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ ಯತ್ನಾಳ ಬಣದ ಪ್ರಮುಖ ಜಿ.ಎಂ.ಸಿದ್ಧೇಶ್ವರ ಅವರು, ಶೀಘ್ರದಲ್ಲಿ ಒಳ್ಳೆಯ ಸುದ್ದಿ ಬರಲಿದೆ. ನಮ್ಮ ರಾಷ್ಟ್ರೀಯ ನಾಯಕರು ಒಳ್ಳೆಯ ಸುದ್ದಿಯನ್ನು ನೀಡಲಿದ್ದಾರೆಂದು ಅವರು ಮಾಹಿತಿ ನೀಡಿದರು.
ನಮ್ಮ ಹೋರಾಟಕ್ಮೆ ಜಯ ದೊರೆಯಲಿದೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಂದರೆ ರಾಜ್ಯ ಬಿಜೆಪಿ ಅಧ್ಯಕ್ಷ ಬದಲಾವಣೆ ಖಚಿತ ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ತಮ್ಮ ಹೋರಾಟಕ್ಕೆ ಗೆಲುವು ದೊರೆಯಲಿದೆ ಎಂದಿದ್ದಾರೆ. ಕಾದು ನೋಡಬೇಕು. ಬಿಜೆಪಿಯಲ್ಲ ಬಣ ಬಡಿದಾಟ ತೀವ್ರತೆ ಹೆಚ್ಚಾಗಿದ್ದು, ಇಂದು ಅಂತಿಮ ಹಂತಕ್ಕೆ ಬರುವ ನಿರೀಕ್ಷೆ ಕಾಣುತ್ತಿದೆ.