ಪ್ರಮುಖ ಸುದ್ದಿ

ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು- ಗದ್ದುಗೆ

ಸ್ವಾಗತ ಮತ್ತು ಸಾಂಸ್ಕøತಿಕ ಕಾರ್ಯಕ್ರಮ

ವಿದ್ಯಾರ್ಥಿಗಳು ದೇಶದ ಭವಿಷ್ಯದ ರೂವಾರಿಗಳು- ಗದ್ದುಗೆ

ಸ್ವಾಗತ ಮತ್ತು ಸಾಂಸ್ಕøತಿಕ ಕಾರ್ಯಕ್ರಮ

yadgiri, ಶಹಾಪುರಃ ವಿದ್ಯಾರ್ಥಿಗಳ ಜೀವನ ಮಹತ್ವದ ಘಟ್ಟ. ಈ ಸಮಯದಲ್ಲಿ ಕಲಿಕೆಗೆ ಪ್ರಾಧಾನ್ಯತೆ ನೀಡಬೇಕು. ಮುಂದೆ ನೀವೆಲ್ಲ ದೇಶದ ಭವಿಷ್ಯದ ರೂವಾರಿಗಳು. ಹೀಗಾಗಿ ಕಲಿಕಾ ಸಮಯದಲ್ಲಿ ಶ್ರಮಪಟ್ಟು ವಿದ್ಯಾಭ್ಯಾಸ ಮಾಡಿ ಉತ್ತಮ ಹುದ್ದೆ ಅಲಂಕರಿಸಬೇಕೆಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ.ಗದ್ದುಗೆ ಕರೆ ನೀಡಿದರು.
ನಗರದ ಗೋಕುಲ ಪದವಿ ಮಹಾವಿದ್ಯಾಲಯ ಹಾಗೂ ಶುಭಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಾಗತ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೆತ್ತವರು ಇಡಿ ದಿನ ದುಡಿದು ನಿಮ್ಮೆಲ್ಲರನ್ನು ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಮುಂದೆ ಒಳ್ಳೆ ಸರ್ಕಾರಿ ನೌಕರಿ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಲಿ ಎಂಬ ಸದಾಶಯದಿಂದ ನಿಮಗೆ ಯಾವ ತೊಂದರೆಯು ಆಗದಂತೆ ಸ್ವತಃ ಕಷ್ಟ ಅನುಭವಿಸಿ ಮಕ್ಕಳನ್ನು ವಿದ್ಯಾಭ್ಯಾಸ ಮಾಡಲು ಕಳುಹಿಸುತ್ತಾರೆ. ತಾವೆಲ್ಲ ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕಠಿಣ ಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಓದಿದ ಶಾಲಾ ಕಾಲೇಜಿಗೂ ಬೋಧನೆ ಮಾಡಿದ ಶಿಕ್ಷಕ, ಉಪನ್ಯಾಸಕರ ಜತೆಗೆ ಪೋಷಕರಿಗೂ ಗೌರವ ತರಿಸುವಂತ ಸಾಧನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೈ.ಎಚ್.ವಜ್ಜಲ್ ಮಾತನಾಡಿ, ಮಕ್ಕಳು ಸಾಧಕರ ಜೀವನ ಚರಿತ್ರೆಗಳನ್ನು ಓದಬೇಕು. ಪ್ರಸ್ತುತ ಸಾಧಕರನ್ನು ಭೇಟಿಯಾಗಬೇಕು. ಅವರ ಮಾರ್ಗದರ್ಶನ ಪಡೆಯಬೇಕು. ಅವರ ಪ್ರೇರಣೆಯಿಂದ ನೀವು ಸಾಧನೆಯ ಹಾದಿಯಲ್ಲಿ ನಡೆಯಬೇಕೆಂದು ಹಲವಾರು ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಮಾತನಾಡಿದರು. ಕಾಲೇಜಿನ ಉಪನ್ಯಾಸಕ, ಆಡಳಿತಾಧಿಕಾರಿ ದೇವಿಂದ್ರಪ್ಪ ಸಜ್ಜನ್ ಪ್ರಾಸ್ತವಿಕವಾಗಿ ಮಾತನಾಡಿದರು. ಶುಭಂ ಕಾಲೇಜು ಪ್ರಾಂಶುಪಾಲ ಹರೀಶ ಪಾಟೀಲ್, ಉಪನ್ಯಾಸಕಾ ಪ್ರಭುಗೌಡ ಉಪಸ್ಥಿತರಿದ್ದರು. ಗೋಕುಲ ಪದವಿ ಕಾಲೇಜಿನ ಪ್ರಾಂಶುಪಾಲ ಧನರಾಜ ದೊಡ್ಡಮನಿ ಅಧ್ಯಕ್ಷತೆವಹಿಸಿದ್ದರು. ವಿದ್ಯಾರ್ಥಿನಿ ಮೇಘಾ ಹಾಗೂ ತಂಡ ಪ್ರಾರ್ಥನೆ ಗೀತೆ ಹಾಡಿದರು. ದೇವಿಂದ್ರ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿನಿ ಪವಿತ್ರ ಭರತನಾಟ್ಯ ಗಮನ ಸೆಳೆಯಿತು. ನಂತರ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಇದೇ ವೇಳೆ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
—————-

 

Related Articles

Leave a Reply

Your email address will not be published. Required fields are marked *

Back to top button