ಅದೃಷ್ಟ ಎಂಬುವದಿದೆಯೇ.? ಈ ಸೋಮಾರಿಯ ಕಥೆ ಓದಿ
ಚಿನ್ನದ ಹಿಲಮೆ
ಮಲ್ಲಣ್ಣ ಪೈಲ್ವಾನನಂತೆ ದೇಹ ಬೆಳೆಸಿಕೊಂಡು ನಿಜಕ್ಕೂ ಸೋಮಾರಿಯೇ ಆಗಿದ್ದ. ಹೆಂಡತಿಯನ್ನು ‘ಚಿನ್ನಾ’ ಎಂದೇ ಪ್ರೀತಿಯಿಂದಲೇ ಕರೆಯುತ್ತಿದ್ದ. ಆದರೆ ಆಕೆಗೆ ಗಂಡನ ಆಲಸ್ಯದ ಬಗ್ಗೆ ಬಹಳ ನೋವಿತ್ತು. ಒಮ್ಮೆ ಇಬ್ಬರಿಗೂ ಜಗಳವಾಗಿ ಆಕೆ ಸೋಮಾರಿ ಗಂಡ ಉದ್ಯೋಗದ ನೆಲೆಯಲ್ಲಿ ನಲಿಯಲೇಬೇಕೆಂದು ಒತ್ತಾಯಿಸಿ ಮನೆಯಿಂದ ಹೊರಗೆ ಹಾಕಿಬಿಟ್ಟಳು.
ಈಗ ತಲೆಬಿಸಿಯಿಂದ ನಗರದ ಹೊರಗಿನ ಹೂದೋಟದಲ್ಲಿ ಕುಳಿತಿರುವಾಗ ಚಿನ್ನದ ನೂಲಿನಿಂದ ನೇಯ್ದ ವಸ್ತವೊಂದು ಗಾಳಿಯಲ್ಲಿ ಹಾರಿ ಬರುತ್ತಿತ್ತು. ಆಶ್ಚಯ್ಯದಿಂದ ಅದನ್ನು ನೋಡುತ್ತಲೇ ಇದ್ದಂತೆ ರಾಜರಸ್ತೆಯಲ್ಲಿ ಡಂಗುರದ ಸದ್ದು ಕೇಳಿ ಬಂತು. ‘ಮಹಾರಾಣಿಯವರ ಮುಖಪರದೆ ವಸ್ತ್ರ ಕಳೆದು ಹೋಗಿದೆ. ಅದನ್ನು ಹುಡುಕಿ ತಂದವರಿಗೆ ಹತ್ತು ಚಿನ್ನದ ನಾಣ್ಯ ಕೊಡಲಾಗುತ್ತೆ.
ಆ ವಸ್ತ್ರ ರಾಣಿಯದೇ ಎಂದಾತನಿಗೆ ಖಚಿತವಾಯಿತು. ಅಲ್ಲೇ ಮೊದೆಯಲ್ಲಿ ಅವನ್ನು ಅಡಗಿಸಿಟ್ಟು ಅರಮನೆಯತ್ತ ನಡೆದ.
ರಾಜನ ಬಳಿ ಹೋಗಿ ‘ಮುಖದ ಪರದೆಯ ಬಗ್ಗೆ ಮಾಹಿತಿ ಹೇಳಬಲ್ಲೆ’ ಎಂದ. ರಾಜ ಕೇಳಿದ. ನಿಖರವಾಗಿಯೇ ಎಲ್ಲಿದೆ ಎಂದು ಹೇಳಿದ. ರಾಜನು ಸೇವಕರನ್ನು ಓಡಿಸಿ ತರಿಸಿದ.
ರಾಜನಿಗೆ ಖುಷಿಯಾಯಿತು. ಇನ್ನೂ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟ ಇವನ ದಿವ್ಯದೃಷ್ಟಿ ಇರುವುದು ನಿಜವೇ ಎಂದು ತಿಳಿಯುವ ಆಸಕ್ತಿ ಅವನಿಗೂ ಮೂಡಿತು. ಹಾಗೆಂದೇ ರಾಜನು ತನ್ನ ಕಿರುಬೆರಳಿನಲ್ಲಿರುವ ಉಂಗುರವನ್ನು
ಮುಷ್ಟಿಯಲ್ಲಿ ಮುಚ್ಚಿ ಹಿಡಿದುಕೊಂಡು ಅದನ್ನು ಮುಖದ ಮುಂದೆ ಹಿಡಿದುಕೊಂಡು ನಿನ್ನ ದಿವ್ಯ ದೃಷ್ಟಿಯಿಂದ ಈ ಮುಷ್ಟಿಯಲ್ಲಿ ಏನಿದೆ ಎಂದು ಹೇಳು ನೋಡೋಣ’ ಎಂದೇ ಬಿಟ್ಟ.
ಮಲ್ಲಣ್ಣ ಬೆವತೇ ಬಿಟ್ಟ. ತಕ್ಷಣ ಹೆಂಡತಿಯ ಸ್ಮರಣೆ ಮಾಡಿ ‘ಚಿನ್ನಾ’ ಎಂದ. ತಕ್ಷಣ ರಾಜನು ‘ಭೇಷ್, ನಿಜವಾಗಿಯೂ ನಿನಗೆ ದಿವ್ಯದೃಷ್ಟಿ ಇದೆ’ ಎಂದಾತನನ್ನು ಆಸ್ಥಾನದಲ್ಲೇ ನೇಮಿಸಿಕೊಂಡ.
ಒಮ್ಮೆ ಅರಮನೆಯ ಚಿನ್ನಾಭರಣಗಳೇ ಕಳುವಾದವು. ಮಲ್ಲಣ್ಣನಿಗೆ ಬುಲಾವ್ ಹೋಯಿತು. ಒಂದೇ ದಿನದಲ್ಲಿ ಕಳ್ಳನ ಪತ್ತೆ ಮಾಡಲೇಬೇಕಾಗಿತ್ತು. ರಾತ್ರಿ ಇಡೀ ನಿದ್ರೆ ಇಲ್ಲದೆ ಆಚಿಂದೀಚೆಗೆ ತಲೆಬಿಸಿಯಿಂದ ತಿರುಗುತ್ತಲೇ ಇದ್ದ ಮಲ್ಲಣ್ಣ. ಆ ಕಳ್ಳನಿಗೆ ತನ್ನಷ್ಟಕ್ಕೆ ‘ಲೇ ಕಳ್ಳಕೋರಮ, ಕಳಿಂಗ ನನ್ನ ಮಗನೇ, ನಿನ್ನ ತಲೆ ಹಾರಿಸಲೇಬೇಕು’ ಎಂದು ಕೂಗುತ್ತಿದ್ದ.
ಅರಮನೆಯಿಂದ ಹೊರಬಿದ್ದ ಕಳ್ಳ ಮಲ್ಲಣ್ಣನ ಮನೆಯ ಮೂಲೆಯಲ್ಲೇ ಅಡಗಿ ಕುಳಿತಿದ್ದ. ‘ಕಳಿಂಗ’ ಎಂದು ಈತನು ಹೇಳಿದಾಗ ಆತನಿಗೆ ಭಯ ಹೆಚ್ಚಿತು. ಆತನ ಹೆಸರೇ ಅದಾಗಿತ್ತು. ನಡುಗುತ್ತಲೇ ಮಲ್ಲಣ್ಣನ ಕಾಲು ಹಿಡಿದುಕೊಂಡು ‘ಅಣ್ಣ ನಂದು ತಪ್ಪಾಯ್ತು. ನೀನೇ ನನ್ನ ತಂದೆ. ನನ್ನ ಜೀವ ಉಳಿಸೋ…’ ಎಂದು ಬೇಡಿದ.
ಅವನಿಂದ ಆಭರಣವನ್ನೆಲ್ಲ ಪಡೆದ. ಮರುದಿನ ಕಳ್ಳನ ಬಗ್ಗೆ ಹೋಗಿ ಹೇಳಿದ. ಆದರೆ ಒಂದು ಸುಳ್ಳು ಹೇಳಿದ. ಕಳ್ಳನ ಜತೆ ಹೊಡೆದಾಟದಲ್ಲಿ ತಲೆಗೇನೇ ಏಟು ಬಿದ್ದುದರಿಂದ ದಿವ್ಯದೃಷ್ಟಿಯೆಲ್ಲ ಮಸುಕಾಗಿದೆ. ಕ್ಷಮಿಸೋ’ ಎಂದ. ಆದರೂ ರಾಜ ‘ನೀನು ಸಾಕಷ್ಟು ಸಹಾಯ ಮಾಡಿರುವಿ.
ನೀನಿನ್ನು ದುಡಿಯುವುದೇ ಬೇಡ. ನಿನ್ನನ್ನು ನಾನು ಸಾಕುತ್ತಲೇ ಇರುವೆ’ ಎಂದೇ ಆಶ್ವಾಸನೆಯನ್ನೂ ನೀಡಿದ.
ನೀತಿ:– ಅದೃಷ್ಟ ಎಂಬುದಿದೆಯೇ? ಪ್ರಶ್ನೆಗೆ ಉತ್ತರ ಇದು. ಅದು ಸಾಧಿಸುವ ಬಗೆ ಹೇಗೆ ಎಂಬುದು “ಬದುಕು ಜಟಕಾಬಂಡಿ” ಸತ್ಯ. ಅದು ಯಶಸ್ಸಿನ ಸೂತ್ರ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.