ಪ್ರಮುಖ ಸುದ್ದಿ
ಗೌರಿ ಲಂಕೇಶ್ ಹತ್ಯೆ ಕೇಸ್ : ಸಿಂದಗಿ ಮೂಲದ ಆರೋಪಿ ಅರೆಸ್ಟ್!
ಬೆಂಗಳೂರು: 2017 ರ ಸೆಪ್ಟೆಂಬರ್ 05 ರಂದು ನಡೆದಿರುವ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮತ್ತೋರ್ವ ಆರೋಪಿಯನ್ನು ಅನುಚೇತ್ ನೇತೃತ್ವದ ಎಸ್ ಐ ಟಿ ಟೀಮ್ ಬಂಧಿಸಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಮೂಲದ ಪರಶುರಾಮ್ ನನ್ನು ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪರಶುರಾಮ್ , ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗುತ್ತಿದೆ.
ಆರೋಪಿ ಪರಶುರಾಮ್ ನನ್ನು ಎಸ್ ಐಟಿ ಟೀಮ್ ಬೆಂಗಳೂರಿನ ಎಸಿಎಂಎಂ ಕೋರ್ಟಿಗೆ ಹಾಜರು ಪಡಿಸಿದೆ. ಜೂನ್ 24 ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ ಎಂದು ತಿಳಿದು ಬಂದಿದೆ.