ಶಹಾಪುರಃ ಸನೌಸಂಘದ ಚುನಾವಣೆಯಲ್ಲಿ ಗೆಲುವ ಸಾಧಿಸಿದವರಾರು.?
24 ಜನ ಅವಿರೋಧ, 6 ಸ್ಥಾನಕ್ಕೆ ಸ್ಪರ್ಧೆಃ ಮತದಾನ ಶಾಂತಿಯುತ
ಯಾದಗಿರಿ,ಶಹಾಪುರಃ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಗುರುವಾರ ಜರುಗಿತು.
ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಎರಡು ಮತಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ನೌಕರರು ಸಾಲಾಗಿ ನಿಂತು ಮತ ಚಲಾಯಿಸಿದರು.
ಒಟ್ಟು 24 ಇಲಾಖೆಯ 30 ಸ್ಥಾನಗಳಿಗೆ ಸದಸ್ಯರ ಆಯ್ಕೆಯಲ್ಲಿ 24 ಜನ ಅವಿರೋಧವಾಗಿ ಆಯ್ಕೆಗೊಂಡಿದ್ದು, 6 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು.
ಇದರಲ್ಲಿ ಆರೋಗ್ಯ ಇಲಾಖೆಯ 4 ಸ್ಥಾನಗಳಿಗೆ ಮತ್ತು ಪ್ರೌಢ ಶಾಲಾ ವಿಭಾಗದ 2 ಸ್ಥಾನಗಳಿಗೆ ಮತದಾನ ಜರುಗಿತು. ಇದರಲ್ಲಿ ಅರಣ್ಯ ಇಲಾಖೆ ನೌಕರರು ಮಾತ್ರ ಸ್ಪರ್ಧೆ ಮಾಡದೆ ಸಂಘದಿಂದ ಹಿಂದೆ ಉಳಿದಿದ್ದಾರೆ.
ಗುರುವಾರ ನಡೆದ ಚುನಾವಣೆಯಲ್ಲಿ ಪ್ರೌಢ ಶಾಲಾ ವಿಭಾಗದಿಂದ ರಸ್ತಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸನಗೌಡ ಬೆಳ್ಳಿಕಟ್ಟಿ 162 ಮತಗಳನ್ನು ಪಡೆದು ಜಯ ಸಾಧಿಸಿದರೆ, ಗೋಗಿ ಕನ್ಯಾ ಪ್ರೌಢ ಶಾಲೆಯ ಶಿಕ್ಷಕ ವೀರಭದ್ರ ಬಡಿಗೇರ 132 ಮತಗಳನ್ನು ಪಡೆದು ವಿಜಯಿಯಾದರು.

ಅದರಂತೆ ಆರೋಗ್ಯ ಇಲಾಖೆಯಡಿ ನಾಲ್ಕು ಸ್ಥಾನಗಳಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಂತೋಷ ಮುಳಜೆ, ಸಗರ ಪ್ರಾಆಕೇಂದ್ರದ ನಿಂಗಣ್ಣ ಪುರ್ಲೆ, ಸ್ಥಳೀಯ ಸರ್ಕಾರಿ ಆಸ್ಪತ್ರೆ ಡಿ.ದರ್ಜೆ ನೌಕರ ಮಲ್ಲಿಕಾರ್ಜುನ, ಬೆಂಡೆಬೆಂಬಳಿ ಪ್ರಾಆಕೇಂದ್ರದ ಮಲ್ಲೇಶ ಹೊಸಮನಿ ಜಯ ಸಾಧಿಸಿದ್ದಾರೆ.