ಪ್ರಮುಖ ಸುದ್ದಿ

ಬೆಳಗ್ಗೆ ಏಳುವ ವೇಳೆ‌ ಕುಸಿದು ಬಿತ್ತು ಮೇಲ್ಛಾವಣಿ: ಅಜ್ಜಿ ಮೊಮ್ಮಕ್ಕಳನು ಚಿರನಿದ್ರೆಗೆ ಕರೆದೊಯ್ಯಿತು!

ಮೇಲ್ಛಾವಣಿ ಕುಸಿದು ಬಿದ್ದು ಅಜ್ಜಿ-ಮೊಮ್ಮಕ್ಕಳು ಸಾವು!

ಗದಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಪರಿಣಾಮ ಕೋಣೆಯೊಂದರಲ್ಲಿ ನಿದ್ರೆಯಲ್ಲಿದ್ದ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಅಸುನೀಗಿದ ದುರ್ಘಟನೆ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಅಜ್ಜಿ ಮಾಬುಬೀ (50), ಮೊಮ್ಮಕ್ಕಳಾದ ನಾಜಮೀನ್ (8), ಮುಸ್ತಾನ್ (6) ಸಾವಿಗೀಡಾದ್ದಾರೆ. ಮತ್ತೊಂದು ಕೊಠಡಿಯಲ್ಲಿದ್ದ ದಾವಲಬೀ (58) ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಬೆಳಗಿನ ಜಾವ ಇನ್ನೇನು ಆ ಮೂವರು ಎದ್ದೇಳುವ ವೇಳೆಯಲ್ಲೇ ದುರ್ಘಟನೆ ನಡೆದಿದ್ದು ಚಿರನಿದ್ರೆಗೆ ಜಾರಿದಂತಾಗಿದೆ ಎಂದು ಕುಟುಂಬಸ್ಥರು ದುಖ: ವ್ಯಕ್ತಪಡಿಸಿದ್ದಾರೆ. ಇನ್ನಿಬ್ಬರು ಬೆಳಗಿನ ಜಾವ ಎದ್ದು ಬಹಿರ್ದೆಸೆಗೆ ಹೋಗಿದ್ದರಿಂದ ಬಚಾವ್ ಆಗಿದ್ದಾರೆಂದು ತಿಳಿದು ಬಂದಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button