ಪ್ರಮುಖ ಸುದ್ದಿ
ರಥೋತ್ಸವ ವೇಳೆ ಗುಂಪು ಘರ್ಷಣೆ, 15ಜನರಿಗೆ ಗಾಯ
ಕಲಬುರಗಿ : ಜಿಲ್ಲೆಯ ಜೇವರಗಿ ತಾಲೂಕಿನ ಕೊಂಡಗುಳಿ ಗ್ರಾಮದ ಮರೆಮ್ಮ ದೇವಿ ಜಾತ್ರೆಯ ಅಂಗವಾಗಿ ಇಂದು ಸಂಭ್ರಮದಿಂದಲೇ ರಥೋತ್ಸವ ನಡೆದಿತ್ತು. ಆದರೆ, ತೇರು ಎಳೆಯುವ ವಿಚಾರದಲ್ಲಿ ದಲಿತ ಮತ್ತು ಸವರ್ಣೀಯರ ಮದ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ. ಪರಿಣಾಮ ಎರಡೂ ಸಮುದಾಯದ ನಡುವೆ ಗುಂಪು ಘರ್ಷಣೆ ನಡೆದಿದೆ ಎಂದು ತಿಳಿದು ಬಂದಿದೆ.
ಗುಂಪು ಘರ್ಷಣೆಯಲ್ಲಿ ಕೆಲ ಮಹಿಳೆಯರು ಸೇರಿದಂತ 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಾಳುಗಳು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ಬೂಧಿ ಮುಚ್ಚಿದ ಕೆಂಡದ ಸ್ಥಿತಿಯಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಘರ್ಷಣೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಡ್ರಾಮಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.