ನೀವು ಬಿಜೆಪಿ ನಾಯಕರಾ.? ಅನುಮಾನ ಮೂಡಿದೆ – ಈಶ್ವರಪ್ಪ ಹೀಗಂದಿದ್ದು ಯಾಕೆ.?
ನೀವು ಬಿಜೆಪಿ ನಾಯಕರಾ.? ಅನುಮಾನ ಮೂಡಿದೆ – ಈಶ್ವರಪ್ಪ ಹೀಗಂದಿದ್ದು ಯಾಕೆ.?
ವಿವಿ ಡೆಸ್ಕ್ಃ ಪಕ್ಷದ ವಿರುದ್ಧ ಅಸಮಾಧಾನ ಹಾಕುವ ಬರದಲ್ಲಿ ಬಾಯಿಗೆ ಬಂದಂತೆ ಮಾತಾಡುವದು ಸರಿಯಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ದೊರೆತಿಲ್ಲ ಎಂಬ ಕಾರಣಕ್ಕೆ ಪಕ್ಷಕ್ಕೆ ಡ್ಯಾಮೇಜ್ ಮಾಡುವದು ಸರಿಯಲ್ಲ. ಶಿಸ್ತಿನ ಪಕ್ಷದಲ್ಲಿದ್ದು ಅಶಿಸ್ತಿನ ವರ್ತನೆ ಸರಿಯಲ್ಲ.ಕೆಲವರ ಹೇಳಿಕೆ ಇವರು ಬಿಜೆಪಿ ನಾಯಕರಾ.? ಎಂಬ ಅನುಮಾನ ಮೂಡುವಂತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಪಕ್ಷ ಅಧಿಕಾರಕ್ಕೆ ಬರಲು ಹೊಸದಾಗಿ ಪಕ್ಷಕ್ಕೆ ಸೇರಿದವರಿಗೆ ಸ್ಥಾನಮಾನ ಕೊಡುವದು ಸಹಜ. ಇದನ್ನು ಅರ್ಥೈಸಿಕೊಂಡು ನಡೆಯಬೇಕು.
ಅದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುವದು ಸರಿಯಲ್ಲ. ಪಕ್ಷದೊಳಗಡೆ ಮಾತನಾಡಬೇಕು. ಅದು ಸಿಎಂ ಅವರನ್ನು ದೂರೋದು,ಅವರ ಕುಟುಂಬಸ್ಥರ ವಿರುದ್ಧ ಆರೋಪ ಮಾಡುವದು ಎಷ್ಟರ ಮಟ್ಟಿಗೆ ಸರಿ ಎನಿಸುತ್ತದೆ. ಇದು ಬಿಜೆಪಿ ನಾಯಕರು ಶಿಸ್ತಿನ ಪಕ್ಷದಲ್ಲಿದ್ದುಕೊಂಡು ಅದಕ್ಕೆ ಧಕ್ಕೆ ತರುವಂಥ ಕೆಲಸ ಮಾಡಬಾರದು ಎಂದರು.