ಚಂದನ್ ಪ್ರೇಮ ನಿವೇದನೆ ಮಾಡಿದ ನಾನು ಒಪ್ಪಿದೆ-ನಿವೇದಿತಾಗೌಡ
ಚಂದನ್ ಹೇಳಿದ ಆಯ್ ಲವ್ ಯು ಗೆ ನಿವೇದಿತಾ ಫಿದಾ..!
ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ ಚಂದನ್
ಮೈಸೂರಃ ಮೊನ್ನೆ ಯುವ ದಸಾರಾ ಕಾರ್ಯಕ್ರಮದಲ್ಲಿ ಚಂದನ್ ಶೆಟ್ ನಿವೇದಿತಾಗೌಡ ಅವರಿಗೆ ಪ್ರಪೋಸ್ ಮಾಡಿದ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಬಿಗ್ ಬಾಸ್ ಯುವರಾಣಿ ನಿವೇದಿತಾಗೌಡ ಚಂದನ್ ಶೆಟ್ಟಿ ಮತ್ತೊಂದು ವಿಡಿಯೋ ಬಿಟ್ಟಿದ್ದು, ಅದಕ್ಕೆ ಸ್ಪಷ್ಟನೆ ನೀಡಿದ್ದಾಳೆ.
ಚಂದನ್ ಶೆಟ್ಟಿ ಪ್ರೇಮ ನಿವೇದಿನೆ ಮಾಡಿದ್ದಾರೆ. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ. ಇದು ನನ್ನ ಕನಸಾಗಿತ್ತು. ಚಂದನ್ ನನಗೆ ಪ್ರಪೋಸ್ ಮಾಡಿರುವದು ನನಗೆ ಸಂತತ ತಂದಿದೆ. ಆ ಕ್ಷಣದಿಂದ ಹೊರಬರಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಂದನ್ ಶೆಟ್ಟಿ ಮತ್ತು ನಿವೇದಿತಾ ತಮ್ಮ ಲವ್ ಪಯಣಕ್ಕೆ ಯುವ ದಸಾರಾ ಬಳಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಂತು ನಿಜ. ಎನಿ ವೇ..ಜೋಡಿ ಹಕ್ಕಿಗಳಿಗೆ ಶುಭವಾಗಲಿ..ಆದರೆ ಮುಂದಿನವರು ಅರ್ಥೈಸಿಕೊಳ್ಳಲಿ, ಯುವ ದಸಾರಾದಂತ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡಿಕೊಳ್ಳುವಂತಹದ್ದು ಏನಿತ್ತು.?
ಯುವ ಪೀಳಿಗೆ ಇವರಂತೆ ಇನ್ನೊಂದು ಯಾವುದೋ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಜನರ ಮಧ್ಯೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವ ಟ್ರೆಂಡ್ ಶುರುವಾಗದಿರಲಿ. ಇವರೋ ಪ್ರಚಾರಗಿಟ್ಟಿಸಲು ಅಥವಾ ಇನ್ನಾವುದೋ ಕಾರಣಕ್ಕೆ ಯುವ ದಸಾರ ಕಾರ್ಯಕ್ರಮದಲ್ಲಿ ಪ್ರೇಮ ನಿವೇದನೆ ಮಾಡುವ ಮೂಲಕ ಸುದ್ದಿಯಾದರು.
ಆದರೆ ಇದರ ಉದ್ದೇಶವೇ ಬೇರೆ, ಈ ಮೊದಲೇ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬುದು ಜಗಜ್ಜಾರಿವಾಗಿತ್ತು. ಎಲ್ಲಾ ಯೂ ಟ್ಯುಬ್ , ಸಾಮಾಜಿಕ ಜಾಲ ತಾಣದಲ್ಲಿ ಇವರ ವಿಡಿಯೋ ಮೆಸೇಜ್ ಹರಿದಾಡಿವೆ. ಆದಾಗ್ಯು ದಸಾರ ವೇಳೆ ಈ ಹುಚ್ಚಾಟ ನಡೆಸಿದ್ದಾರೆ. ಇದು ಪ್ರಚಾರಗೋಸ್ಕರ ಈ ರೀತಿ ಮಾಡಿರಬಹುದು ಇದನ್ನೆ ಯುವ ಸಮೂಹ ಅನುಸರಿಸದಿರಲಿ ಎಂಬುದು ನಾಗರಿಕರ ಕಳಕಳಿಯಾಗಿದೆ.