Homeಜನಮನಪ್ರಮುಖ ಸುದ್ದಿ
ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್: ಇವರಿಗಿಲ್ಲ 2000 ರೂ.
ರಾಜ್ಯ ಸರ್ಕಾರ, ಗೃಹಲಕ್ಷ್ಮಿ ಯೋಜನೆಯಿಂದ ಲಾಭವನ್ನು ಪಡೆದುಕೊಳ್ಳುತ್ತಿರುವ ಮಹಿಳೆಯರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ.
ವಿವಾಹವಾಗಿ ಒಂದೇ ಮನೆಯಲ್ಲಿ ಇದ್ದುಕೊಂಡು ಪ್ರತ್ಯೇಕ ರೇಶನ್ ಕಾರ್ಡ್ ಹೊಂದಿರುವ 1ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಇನ್ನು ಮುಂದೆ 2000 ರೂ. ಸಿಗುವುದಿಲ್ಲ ಎಂದು ವರದಿಯಾಗಿದೆ. ಒಂದೇ ಮನೆಯಲ್ಲಿ 2ಕ್ಕಿಂತ ಹೆಚ್ಚು ರೇಶನ್ ಕಾರ್ಡನ್ನು ಹೊಂದಿದ್ದವರಿಗೆ ಮತ್ತು ನಕಲಿ ರೇಶನ್ ಕಾರ್ಡನ್ನು ಬಳಿಸಿಕೊಂಡು ಈ ಯೋಜನೆ ಲಾಭವನ್ನು ಪಡೆಯುತ್ತಿರುವ ಮಹಿಳೆಯರಿಗೆ ಇನ್ನು ಮುಂದೆ ಈ ಯೋಜನೆಯ ಹಣ ಬರಲ್ಲ ಎಂದು ಸರ್ಕಾರ ತಿಳಿಸಿದೆ.