ಪ್ರಮುಖ ಸುದ್ದಿ

ಗುಜರಾತಿ ಚಲೇ ಗುಜರಾತ್?

ಆಪರೇಷನ್ ಕಮಲ ಭೀತಿಯಿಂದ ಕರ್ನಾಟಕಕ್ಕೆ ಶಿಫ್ಟ್ ಆಗಿದ್ದ ಗುಜರಾತಿನ ಕೈ ಶಾಸಕರು ವಾಪಸ್ ತೆರಳಲು ರೆಡಿಯಾಗಿದ್ದಾರೆ. ಕಳೆದ 6 ದಿನಗಳಿಂದ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು.

ಗುಜರಾತಿನಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಆಪ್ತ ಅಹ್ಮದಪಟೇಲ್ ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿದಿದ್ದಾರೆ. ಹೀಗಾಗಿ, ಬಿಜೆಪಿ ಅಧ್ಯಕ್ಷ ಅಮಿತ ಶಾ ಅವರ ಬದ್ಧ ವೈರಿ ಅಹ್ಮದ್ ಪಟೇಲ್ ಸೋಲಿಸಲು ಬಿಜೆಪಿ ರಣತಂತ್ರ ರೂಪಿಸಿದ್ದು ಈಗಾಗಲೇ 6 ಜನ ಕಾಂಗ್ರೆಸ್ ತೊರೆದು ಕಮಲ ಹಿಡಿದಿದ್ದಾರೆ.

ಬಿಜೆಪಿ ಕಾರ್ಯತಂತ್ರಕ್ಕೆ ಬೆದರಿ ಕಾಂಗ್ರೆಸ್ ಹೈಕಮಾಂಡ್ ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಿತ್ತು. ಆದರೆ, ನಿನ್ನೆ ಬೆಳಗ್ಗೆಯಿಂದಲೇ ಗುಜರಾತಿ ಶಾಸಕರ ದೇಕಬಾಲ್ ಉಸ್ತುವಾರಿ ಹೊತ್ತಿದ್ದ ಪವರ್ ಮಿನಿಸ್ಟರ್ ಡಿಕೆಶಿ ಮನೆ, ಕಚೇರಿ ಹಾಗೂ ಆಪ್ತವಲಯದವರ ಮನೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಇನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಗುಜರಾತಿ ಶಾಸಕರು ತಂಗಿದ್ದ ಈಗಲ್ ಟನ್ ರೆಸಾರ್ಟ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸಚಿವ ಡಿಕೆಶಿ ಕೆಲ ದಾಖಲೆ ಪತ್ರಗಳನ್ನು ಹರಿದುಹಾಕಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಅಂತೆಯೇ ಗುಜರಾತಿನ ಕೈ ಶಾಸಕರೂ ವಿಚಾರಣೆಗೆ ಒಳಪಟ್ಟಿದ್ದಾರೆನ್ನಲಾಗುತ್ತಿದೆ.

ಇದರಿಂದ ವಿಚಲಿತರಾಗಿರುವ ಗುಜರಾತಿನ ಶಾಸಕರು ಹಿಂದಿರುಗುವ ಪಟ್ಟು ಹಿಡಿದಿದ್ದಾರೆ. ಪರಿಣಾಮ ಇಂದು ಬೆಳಗ್ಗೆಯೇ ವಿಶೇಷ ಬಸ್ ಒಂದು ರೇಸಾರ್ಟ್ ಪ್ರವೇಶಿದ್ದು ಗುಜರಾತಿ ಕೈ ಶಾಸಕರು ಮರಳಿಗೂಡಿಗೆ ತೆರಳಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲದೆ ಬಿಜೆಪಿ ಪ್ರಾಬಲ್ಯದಿಂದ ತಪ್ಪಿಸಲು ಗುಜಾರಾತಿನ ಶಾಸಕರನ್ನು ಕರೆತಂದಾಗಲೇ ಕರ್ನಾಟಕದಲ್ಲಿ ಪವರ್ ಮಿನಿಸ್ಟರ್ ಮನೆ ಮೇಲೆ ದಾಳಿ ನಡೆದಿದೆ. ಹೀಗಾಗಿ ಕಾಂಗ್ರೆಸ್ಸಿನ ಜಂಘಾಬಲವೇ ಕುಸಿದಂತಾಗಿದೆ. ಪರಿಣಾಮ, ಮೊದಲೇ ಕಮಲದತ್ತ ಒಲವಿರುವ ಗುಜರಾತಿನ ಕೆಲ ಕೈ ಶಾಸಕರ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಬಗ್ಗೆಯೂ ಲೆಕ್ಕಾಚಾರ ನಡೆಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಗುಜರಾತ ಶಾಸಕರ ಸ್ಥಳಾಂತರಕ್ಕೆ ಚಿಂತಿಸುತ್ತಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button