ಪ್ರಮುಖ ಸುದ್ದಿ
ಶಹಾಪುರ: ಪ್ರಾರ್ಥನಾ ಕಾಲೇಜಿನ ಪರೀಕ್ಷಾ ಕೇಂದ್ರ ರದ್ದು, ಗುಲಬರ್ಗಾ ವಿವಿ ಆದೇಶ
ಶಹಾಪುರ: ಪದವಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಆರೋಪ ಹಿನ್ನೆಲೆಯಲ್ಲಿ ಶಹಾಪುರ ಪಟ್ಟಣದ ಪ್ರಾರ್ಥನಾ ಕಾಲೇಜಿನ ಪರೀಕ್ಷಾ ಕೇಂದ್ರ ರದ್ದು ಪಡಿಸಿ ಗುಲಬರ್ಗಾ ವಿಶ್ವ ವಿದ್ಯಾಲಯ ಆದೇಶಿಸಿದೆ. ಪ್ರಾರ್ಥನಾ ಪದವಿ ಕಾಲೇಜಿನಲ್ಲಿ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಗುಲಬರ್ಗಾ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಡಿ.ಎಂ.ಮದರಿ ತಿಳಿಸಿದ್ದಾರೆ.
ಇನ್ನುಳಿದ ವಿಷಯಗಳ ಪರೀಕ್ಷೆ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯಲಿವೆ ಎಂದು ತಿಳಿದು ಬಂದಿದೆ. ಪದವಿ ಪರೀಕ್ಷೆ ವೇಳೆ ಪ್ರಾರ್ಥನಾ ಕಾಲೇಜಿನಲ್ಲಿ ಸಾಮೂಹಿಕ ನಕಲು ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವ ವಿದ್ಯಾಲಯ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಬಹಳ ವರ್ಷಗಳ ನಂತರ ವಿ.ವಿ ಸೂಕ್ತ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಸರ್.