ಪ್ರಮುಖ ಸುದ್ದಿ

‘ಗೂಳಿ ಗುಟುರು’ : ನನ್ನ ಕ್ಷೇತ್ರದ ಠಾಣೆಯ ಪಿಎಸ್ ಐ ನೇಮಿಸುವಲ್ಲೂ ಸಿಎಂ ಪುತ್ರ ಹಸ್ತಕ್ಷೇಪ

ಬೆಂಗಳೂರು : ಹೊಸದುರ್ಗ ತಾಲೂಕಿನ ಠಾಣೆಗಳಿಗೆ ಪಿಎಸ್ ಐ ನೇಮಿಸುವಲ್ಲಿಯೂ ಸಹ ಸಿಎಂ ಕಚೇರಿ ಹಾಗೂ ಶಿವಮೊಗ್ಗ ಸಂಸದ, ಸಿಎಂ ಪುತ್ರ ಬಿ.ವೈ. ರಾಘವೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಮ್ಮೆ ಗುಟುರು ಹಾಕಿದ್ದಾರೆ. ಮೈತ್ರಿ ಸರ್ಕಾರದಲ್ಲೂ ನನ್ನ ಕ್ಷೇತ್ರಕ್ಕೆ ಸಮರ್ಪಕ ಅನುದಾನ ನೀಡದೆ ಮಲತಾಯಿ ಧೋರಣೆ ತೋರಲಾಗಿತ್ತು. ಈಗ ನಮ್ಮ ಸರ್ಕಾರ ಬಂದಿದೆ ಅಂದುಕೊಂಡರೆ ಈಗಲೂ ಅಭಿವೃದ್ಧಿಯ ಅನುದಾನ ನೀಡುವಲ್ಲಿ ತಾರತಮ್ಯ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಶಾಸಕ ಗೂಳಿಹಟ್ಟಿ ಶೇಖರ್ 2008ರಲ್ಲಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಿದ್ದಾಗ ಅನ್ಯಾಯ ಆಗಿತ್ತು. ಈಗ ಸಚಿವ ಸ್ಥಾನ ನೀಡಿ ಸರಿಪಡಿಸಿ ಹೊಸದುರ್ಗದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಮತ್ತೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರು , ಬೆಂಬಲಿಗರ ಸಭೆ ನಡೆಸಿ ಎಲ್ಲಾ ವಿಚಾರಗಳನ್ನು ಅವರ ಮುಂದಿಡಲಾಗುವುದು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button