ಪ್ರಮುಖ ಸುದ್ದಿ
ಗುಂಡ್ಲುಪೇಟೆಯಲ್ಲಿ ಬಾಂಬ್ ತಪಾಸಣೆ-ಗಡಿಯಲ್ಲಿ ಕಟ್ಟೆಚ್ಚರ
ಚಾಮರಾಜನಗರ ಗುಂಡ್ಲುಪೇಟೆಯಲ್ಲಿ ಬಾಂಬ್ ತಪಾಸಣೆ
ಚಾಮರಾಜನಗರಃ ಜಿಲ್ಲೆಯ ಗುಂಡ್ಲಪೇಟೆಯು ತಮಿಳುನಾಡು ಹಾಗೂ ಕೇರಳ ಗಡಿ ಭಾಗವಾಗಿದ್ದರಿಂದ ಉಗ್ರರು ನುಸುಳಿರಬಹುದು ಎಂಬ ಮಾಹಿತಿ ಬಂದ ಹಿನ್ನೆಲೆ ಇಲ್ಲಿನ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನ್ಯಾಯಾಲಯದ ಆವರಣ ಮತ್ತು ಬಸ್ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ತೀವ್ರ ತಪಾಸಣೆ ನಡೆಸಿದರು.
ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಮೇರೆಗೆ ಪೊಲೀಸರು ಗಡಿ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರವಹಿಸಿದ್ದು, ಶ್ವಾನದಳ ಮತ್ತು ಸ್ಪೋಟಕ ಸಾಮಾಗ್ರಿ ಪತ್ತೆಯಂತ್ರ ಬಳಸಿ ಪರಿಶೀಲನೆ ನಡೆಸಲಾಯಿತು.
ಎಲ್ಲ ಚೆಕ್ ಪೋಸ್ಟ ಹಾಗೂ ಜನನಿಬಿಡ ಸ್ಥಳಗಳಲ್ಲಿ ಶ್ವಾನದಳ ಮತ್ತು ಸ್ಪೋಟಕ ಪತ್ತೆ ಯಂತ್ರಗಳನ್ನು ಬಳಸಿ ತಪಾಸಣೆ ನಡೆಸಲಾಯಿತು. ಆದರೆ ಯಾವುದೇ ಅಂತಹ ಸ್ಪೋಟಕ ವಸ್ತುಗಳು ದೂರಕಿರುವುದಿಲ್ಲಾ ಎಂದು ಅವರು ತಿಳಿಸಿದ್ದಾರೆ.
ವರದಿ-ಸಿದ್ಧರಾಜ ಹನೂರ.