ಬಸವಭಕ್ತಿ
ಗುರುಪೂರ್ಣಿಮೆ : ಪ್ರಧಾನಿ ಮೋದಿಗೆ ಗುರು ದರ್ಶನ ಭಾಗ್ಯ!
ದೆಹಲಿ: ಗುರುಪೂರ್ಣಿಮೆ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥಶ್ರೀಗಳನ್ನು ಭೇಟಿಯಾದರು. ಭೇಟಿ ಬಳಿಕ ಪೇಜಾವರಶ್ರೀಗಳನ್ನು ಭೇಟಿಯಾದ ಕುರಿತು ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಗುರುಪೂರ್ಣಿಮೆಯ ಶುಭ ಸಮಯದಲ್ಲಿ ಉಡುಪಿ ಪೇಜಾವರಶ್ರೀಗಳ ಜತೆಗೆ ಸಮಯ ಕಳೆಯುವ ಸುವರ್ಣಾವಕಾಶ ನನಗೆ ಲಭಿಸಿದೆ. ಅವರ ಮಾತುಗಳನ್ನು ಕೇಳಿ ಕಲಿಯುವುದು ಸಾಕಷ್ಟಿದೆ ಅನಿಸಿದೆ. ಅವರ ಆಲೋಚನೆಗಳನ್ನು ಕೇಳುವುದೇ ವಿಶೇಷ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.