ನೂತನ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಆತ್ಮೀಯ ಸನ್ಮಾನ
ನೂತನ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗೆ ಆತ್ಮೀಯ ಸನ್ಮಾನ
ಶಹಾಪುರಃ ಯಾದಗಿರಿ ಜಿಲ್ಲೆಯ ಬಿಜೆಪಿ ಘಟಕದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನಗರದ ಮುಖಂಡ, ಮಾಜಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಗುರು ಕಾಮಾ ಅವರನ್ನು ನೇಮಕಗೊಂಡ ಹಿನ್ನೆಲೆ ಸ್ಥಳೀಯ ಗೆಳೆಯರ ಬಳಗದಿಂದ ನಗರದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜೂ ಪತ್ತಾರ, ಆತ್ಮೀಯರಾದ ಗುರು ಕಾಮಾ ಅವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವದು ಸಂತಸ ತಂದಿದೆ. ಕಾಮಾ ಅವರು ಜನಪರ ಕಾಳಜಿ ಹೊಂದಿದ್ದು, ಸಂಘಟನಾ ಚತುರತೆಯನ್ನು ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿಯೇ ಕೆಲಸ ಮಾಡಿದ್ದಾರೆ.
ತಾಲೂಕು ಯೂಥ್ ಅಧ್ಯಕ್ಷನಾಗಿ, ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರಾಗಿ ಅಲ್ಲದೆ ಹಲವಾರು ಚುನಾವಣೆಗಳಲ್ಲಿ ನೀಡಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸೃಜನಶೀಲ, ಉತ್ಸಾಹಿ ಗುರು ಕಾಮಾ ಅವರನ್ನು ಪಕ್ಷ ಗುರುತಿಸಿ ಜವಬ್ದಾರಿ ನೀಡಿರುವದು ಜಿಲ್ಲಾಮಟ್ಟದಲ್ಲಿ ಸಂಭ್ರಮ ಮೂಡಿಸಿದೆ.
ಅವರು ಸಾಮಾಜಿಕ ನ್ಯಾಯ, ನಗರ ಅಭಿವೃದ್ಧಿಗೆ ಸಾಮೂಹಿಕ ಹೋರಾಟ ನಡೆಸುವ ಮೂಲಕ ಮನೆ ಮಾತಾಗಿದ್ದಾರೆ. ಎಲ್ಲಾ ವರ್ಗದವರನ್ನು ಜೊತೆಯಲ್ಲಿ ಕರೆದುಕೊಂಡುವ ಹೋಗುವ ಶಕ್ತಿ ಅವರಲ್ಲಿ ಯಾವುದೇ ಭೇದಭಾವ ಇಲ್ಲದೆ ಎಲ್ಲರೊಂದಿಗೆ ಸಹಾನುಭೂತಿಯಿಂದಲೇ ವರ್ತಿಸುವ ಗುಣಶೀಲರಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಜಗಧೀಶ ಹೊನ್ಕಲ್, ರಾಜೂ ಚಿಲ್ಲಾಳ, ಶರಣಗೌಡ ಕಟ್ಟಿಮನಿ, ಮಲ್ಲಿಕಾರ್ಜುನ ಬಾಗಲಿ, ಉಮೇಶ ಬಾಗೇವಾಡಿ, ಶಕೀಲ ಮುಲ್ಲಾ, ಅಮೃತ ಹೂಗಾರ, ಬಸವರಾಜ ಚೌದ್ರಿ, ರಮೇಶ ನಗನೂರ, ಅರವಿಂದ ಟೆಲ್ಲೂರ, ಮಲ್ಲಿಕಾರ್ಜುನ ಕಟ್ಟಿಮನಿ ಇತರರಿದ್ದರು.