ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಿ- ಗುರು ಕಾಮಾ
yadgiri, ಶಹಾಪುರಃ ಐಪಿಎಲ್ ಕ್ರಿಕೆಟ್ ಶುರುವಾಗಿದ್ದರ ಪರಿಣಾಮ ಮತ್ತೆ ಐಪಿಎಲ್ ಬೆಟ್ಟಿಂಗ್ ದಂಧೆ ಅವ್ಯಾಹಿತವಾಗಿ ಹರಡಿದ್ದು, ಯುವ ಸಮೂಹ ಬಲಿಯಾಗುತ್ತಿದೆ. ಐಪಿಎಲ್ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ರಾಜ್ಯ ಪೊಲೀಸ್ ಇಲಾಖೆ ವಿಶೇಷ ತಂಡ ರಚಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಬೇಕೆಂದು ಯಾದಗಿರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರು ಎಸ್.ಕಾಮಾ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲಾದ್ಯಂತ ಸ್ಥಳೀಯವಾಗಿ ಬುಕ್ಕಿಗಳು ಹುಟ್ಟಿಕೊಂಡಿದ್ದು, ಮತ್ತೆ ಬೆಟ್ಟಿಂಗ್ ಆರ್ಭಟ ಶುರುವಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳು, ಯುವಕರು ಬಲಿಯಾಗಿದ್ದು ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ.
ಯಾದಗಿರಿ ಜಿಲ್ಲೆ ಸೇರಿದಂತೆ ಪಕ್ಕದ ಕಲಬರ್ಗಿ, ರಾಯಚೂರ ಜಿಲ್ಲೆಯಲ್ಲೂ ಬೆಟ್ಟಿಂಗ್ ದಂಧೆ ಜೋರಾಗಿದೆ.
ಕಾರಣ ಮುಖ್ಯಮಂತ್ರಿಗಳು ಈ ಕುರಿತು ಬುಕ್ಕಿಗಳನ್ನು ಗುರುತಿಸಿ ಕಠಿಣ ಕ್ರಮಕೈಗೊಳ್ಳುವ ಮೂಲಕ ಐಪಿಎಲ್ ಬೆಟ್ಟಿಂಗ್ ಎಂಬ ಕೆಟ್ಟ ದಂಧೆಗೆ ಬ್ರೇಕ್ ಹಾಕಬೇಕು.
ಈ ಮೂಲಕ ಸಾವಿರಾರು ಕುಟುಂಬಗಳ ರಕ್ಷಣೆ ಮಾಡಿದಂತಾಗಲಿದೆ. ಇಲ್ಲವಾದಲ್ಲಿ ಸಣ್ಣ ವಯಸ್ಸಿನಲ್ಲೇ ಕೆಟ್ಟ ದಂಧೆಗೆ ಇಳಿದು ಜೀವನ ಹಾಳುಗೆಡಿವಿಕೊಳ್ಳುತ್ತಿದ್ದಾರೆ. ಬೆಟ್ಟಿಂಗ್ ದಂಧೆಯಲ್ಲಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿ ಸಾಲಸೂಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸಾಕಷ್ಟು ಪ್ರಕರಣಗಳು ಕಣ್ಮುಂದೆ ಇವೆ. ಹೀಗಾಗಿ ಯುವಕರು ತಪ್ಪು ದಾರಿಗೆ ಹೋಗುತ್ತಿರುವದನ್ನು ತಡೆಯಲು ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಲು ಸೂಚಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.