
ದಿನಕ್ಕೊಂದು ಕಥೆ
ಹೆಗಲು ನೀಡು
ತಾಯಿ ತನ್ನ ಪುಟ್ಟ ಮಗಳಿಗೆ ಕೇಳಿದಳು, ನಮ್ಮ ದೇಹದ ಅತ್ಯಂತ ಮುಖ್ಯವಾದ ಭಾಗ ಯಾವುದು ? ಮಗಳಿಗೆ ಶಬ್ದಗಳೆಲ್ಲ ರಂಜನೀಯವೆನಿಸಿತೇನೋ, ಕಿವಿ ಎಂದಳು.
ಅದಕ್ಕೆ ತಾಯಿ, ಕಿವಿ ಕೇಳದೆಯೂ ನಮ್ಮ ನಡುವೆ ಹಲವರಿದ್ದಾರೆ ಎಂದಳು. ಇನ್ನೊಂದಷ್ಟು ವರ್ಷ ಹೋದಾಗ ತಾಯಿ ಮತ್ತದೇ ಪ್ರಶ್ನೆ ಕೇಳಿದಳು. ಮಗಳು, ಕಣ್ಣು ಎಂದಳು. ಕಣ್ಣಿಲ್ಲದೆಯೂ ಬದುಕುತ್ತಿರುವವರು ಹಲವರಿದ್ದಾರೆ ಎಂದಳು ತಾಯಿ. ಇದು ಹೀಗೇ ಮುಂದುವರೆಯಿತು.
ಒಮ್ಮೆ ಹುಡುಗಿಯ ಅಜ್ಜ ತೀರಿಹೋದ. ಇದೇ ಮೊದಲ ಬಾರಿಗೆ ಮಗಳು ಅಪ್ಪ ಅಳುವುದನ್ನು ನೋಡುತ್ತಿದ್ದಳು. ಆತ ಗೆಳೆಯನ ಹೆಗಲಲ್ಲಿ ಮುಖವಿಟ್ಟು ಅಳುತ್ತಿದ್ದ. ಆಗ ತಾಯಿ ಬಂದು ಮತ್ತದೇ ಪ್ರಶ್ನೆ ಕೇಳಿದಳು ಮಗಳಿಗೆ. ಅಮ್ಮನಿಗೆ ಹೊತ್ತು ಗೊತ್ತಿಲ್ಲವೇ ಪ್ರಶ್ನೆ ಕೇಳಲು ಎನಿಸಿತು.
ಆಗ ತಾಯಿಯೇ ಹೇಳಿದಳು, ನಮ್ಮ ದೇಹದ ಅತ್ಯಂತ ಮುಖ್ಯ ಭಾಗವೆಂದರೆ ಹೆಗಲು. ಇನ್ನೊಬ್ಬರು ಅಳುವಾಗ ನಿನ್ನ ಹೆಗಲು ಅವರಿಗೆ ನೀಡುವುದನ್ನು ಕಲಿ. ನೀನು ಅತ್ತಾಗ ಹೆಗಲು ನೀಡುವಂತವರನ್ನೂ ಸಂಪಾದಿಸು.
ಸಂಗ್ರಹ
ಡಾ.ಈಶ್ವರಾನಂದ ಸ್ವಾಮೀಜಿ.
– 9341137882.