ಪ್ರಮುಖ ಸುದ್ದಿ
ಮಂತ್ರಾಲಯದಲ್ಲಿ ಗುರುರಾಯರ 348ನೇ ಆರಾಧನಾ ಮಹೋತ್ಸವ
ಮಂತ್ರಾಲಯ: ಗುರು ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವಕ್ಕೆ ಮಠದ ಪೀಠಾಧಿಪತಿ ಸುಭದೇಂದ್ರ ತೀರ್ಥರು ಚಾಲನೆ ನೀಡಿದರು. ಮಹೋತ್ಸವದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಸಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಗುರುರಾಯರ ಅಪಾರ ಭಕ್ತರು ಮಹೋತ್ಸವಕ್ಕೆ ಸಾಕ್ಷಿಯಾಗಿದ್ದರು. ವಾರವಿಡೀ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ನಾಡಿನ ಮೂಲೆಮೂಲೆಯಿಂದ ಆಗಮಿಸುವ ಭಕ್ತರು ಭಾಗಿಯಾಗಲಿದ್ದಾರೆ.