ನೀವು ATM ಬಳಸುತ್ತೀರಾ, ಮಿಸ್ ಮಾಡದೆ ಈ ಮಾಹಿತಿ ಓದಿಕೊಳ್ಳಿ!
ನವದೆಹಲಿ: ATM ಬಳಕೆದಾರರಿಗೆ ವಂಚಕರ ಜಾಲ ಬೆನ್ನುಬಿಡದೆ ಕಾಡುವುದು ಹೊಸ ಸುದ್ದಿಯೇನಲ್ಲ. ಅನೇಕ ವಿದ್ಯಾವಂತರನ್ನೇ ಯಾಮಾರಿಸಿ ATM , ಪಾಸ್ ವರ್ಡ್ ಪಡೆದು ವಂಚಿಸಿದ ಪ್ರಕರಣಗಳಿಗೆ ಲೆಕ್ಕವಿಲ್ಲ. ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕೆನರಾ ಬ್ಯಾಂಕ್ ಹೊಸದಾಗಿ OTP(ಒನ್ ಟೈಂ ಪಾಸ್ವರ್ಡ್) ವ್ಯವಸ್ಥೆಯನ್ನು ಪರಿಚಯಿಸಿದೆ.
ಎಟಿಎಂ ನಲ್ಲಿ ಹಣ ಡ್ರಾ ಮಾಡಿದಾಕ್ಷಣ ರಿಜಿಸ್ಟರ್ಡ್ ಮೊಬೈಲ್ಗೆ OTP ಮೆಸೇಜ್ ಬರಲಿದೆ. ಆ OTPಯನ್ನು ಎಟಿಎಂನಲ್ಲಿ ನಮೂದಿಸಿದ್ರೆ ಮಾತ್ರ ಅಕೌಂಟ್ನಿಂದ ಹಣ ಪಡೆಯಬಹುದು. ಇಲ್ಲವಾದಲ್ಲಿ ಯಾವದೇ ಕಾರಣಕ್ಕೂ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಾಧ್ಯವಿಲ್ಲ. ಆ ಮೂಲಕ ಎಟಿಎಂ ವಂಚನೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ಕೆನರಾ ಬ್ಯಾಂಕ್ ಹೊಸ ತಂತ್ರಗ್ನಾನ ಅಳವಡಿಸಿದೆ .
We introduce India’s First OTP facility for ATM withdrawals.
Withdrawals in our ATMs now more secure for our card holders.#CanaraSecureATM pic.twitter.com/ZBn07fAGQe— Canara Bank (@canarabank) August 20, 2019