ಪ್ರಮುಖ ಸುದ್ದಿ
ಬಂದೂಕಿನಿಂದ ಗುಂಡು ಹಾರಿಸಿದ ಯುವಕ ಓರ್ವನ ಸ್ಥಿತಿ ಗಂಭೀರ
ಬಂದೂಕಿನಿಂದ ಗುಂಡು ಹಾರಿಸಿದ ಯುವಕ ಓರ್ವನ ಸ್ಥಿತಿ ಗಂಭೀರ
ಯಾದಗಿರಿಃ ವ್ಯಕ್ತಿಯೊಬ್ಬ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಓರ್ವ ಗಾಯಗೊಂಡ ಘಟನೆ ಜಿಲ್ಲೆಯ ಗುರುಮಠಕಲ್ ಪಟ್ಟಣದ ಗಡಿ ಮೊಹಲ್ಲಾದಲ್ಲಿ ಘಟನೆ ನಡೆದಿದೆ.
ಅಸಾದ್ (20) ಎಂಬ ಯುವಕ ಡಬಲ್ ಬ್ಯಾರಲ್ ಗನ್ ಮೂಲಕ ಗುಂಡು ಹಾರಿಸಿದ ಪರಿಣಾಮ ಮುಬಾರಕ್ (60) ಎಂಬಾತನ ಎದೆಗೆ ಗುಂಡು ಸಿಡಿದು ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಗೆ ಕಾರಣವೇನು ಎಂಬುದು ಇನ್ನು ತಿಳಿದು ಬಂದಿಲ್ಲ.
ಗುಂಡು ಹಾರಿಸಿದವ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು,
ಗಟನಾ ಸ್ಥಳಕ್ಕೆ ಎಸ್ಪಿ ಯಡಾ ಮಾರ್ಟಿನ್ ಮಾರ್ಬಾನ್ಯಾಂಗ್ ಭೇಟಿ, ಡಿಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಸಮರ್ಪಕ ತನಿಖೆ ನಂತರವೇ ಸತ್ಯ ಹೊರಬರಬೇಕಿದೆ.
ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.