ಪ್ರಮುಖ ಸುದ್ದಿ

ನಾಳೆ ಬೆಳಗ್ಗೆ 10 ಗಂಟೆಗೆ ಬಸವ ಪ್ರತಿಮೆ ಅನಾವರಣ

ಬಸವೇಶ್ವರ ಪ್ರತಿಮೆ ಅನಾವರಣ ನಾಲ್ವರು ಜಗದ್ಗುರುಗಳ ಆಗಮನ

ಯಾದಗಿರಿಃ ಡಿ.17 ರವಿವಾರ ದಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಶಹಾಪುರ ನಗರದ ಶ್ರೀಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಶ್ರೀಬಸವೇಶ್ವರರ ಪ್ರತಿಮೆ ಅನಾವರಣ, ನಂತರ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಧರ್ಮಸಭೆ ಜರುಗಲಿದ್ದು, ಸರ್ವರು ಭಾಗವಹಿಸಬೇಕೆಂದು ಅಖಿಲ ಭಾರತ ವೀರಶೈವ ಯುವ ಘಟಕ ಮನವಿ ಮಾಡಿದೆ.

ಪ್ರತಿಮೆ ಅನಾವರಣ ಮತ್ತು ಧರ್ಮಸಭೆಯ ಪಾವನ ಸಾನ್ನಿಧ್ಯವನ್ನು ರಂಭಾಪುರಿ, ಉಜ್ಜಯಿನಿ, ಶ್ರೀಶೈಲ್, ಕಾಶಿ ಜಗದ್ಗುರುಗಳು ಸೇರಿದಂತೆ ಹಂಪಿ ಹೇಮಕೂಟದ ಡಾ.ಸಂಗನಬಸವ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಶಿರಹಟ್ಟಿಯ ಫಕೀರಸಿದ್ಧರಾಮ ಶ್ರೀ, ದಿಂಗಾಲೇಶ್ವರ ಶ್ರೀ, ಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು ಮತ್ತು ಸ್ಥಳೀಯ ವಿರಕ್ತ ಮಠಾಧೀಶರು, ನಗರದ, ವಿವಿಧ ಗ್ರಾಮಗಳ ಸಮಸ್ತ ಮಠಾಧೀಶರು ಭಾಗವಹಿಸಲಿದ್ದಾರೆ.

ಅಲ್ಲದೆ ವಿಶೇಷ ಆಹ್ವಾನಿತರಾಗಿ ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿಯವರು ಆಗಮಿಸಲಿದ್ದಾರೆ. ಕಾರಣ ಸರ್ವರು ಸಮಯೋಚಿತ ಸಮಯದಲ್ಲಿ ಭಾಗವಹಿಸಿ ಬಸವ ಪ್ರತಿಮೆ ಅನಾವರಣ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಬೇಕೆಂದು ಮುಖಂಡರಾದ ಸುಧೀರ ಚಿಂಚೋಳಿ, ಗುರು ಕಾಮಾ, ಮಲ್ಲಿಕಾರ್ಜುನ ಬುಕಿಸ್ಟಗಾರ, ರವಿ ಮೋಟಗಿ, ಗುರು ಅಂಗಡಿ ಇತರರು ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button