ಸಂಭ್ರಮ ಸಡಗರದಿಂದ ನಡೆದ ಬಲಭೀಮಸೇನ ಪಲ್ಲಕ್ಕಿ ಉತ್ಸವ
ಯಾದಗಿರಿ, ಶಹಾಪುರ: ಮೋತಕಪಲ್ಲಿ ಶ್ರೀಬಲಭೀಮೇಸೇನ ಎಂದೇ ಪ್ರಸಿದ್ಧಿಯಾಗಿರುವ ನಗರದ ಗುತ್ತಿಪೇಟೆದಲ್ಲಿರುವ ದೇವಸ್ಥಾನದಲ್ಲಿ ಏಳನೇ ವರ್ಷದ ಶ್ರೀ ಬಲಭೀಮೇಶ್ವರನ ಉತ್ಸವ ಶೃದ್ಧಾ, ಭಕ್ತಿಯಿಂದ ಜರುಗಿತು.
ಗುರುವಾರ ದಂದು ಶ್ರೀ ಬಲಭೀಮನ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿ ನಗರದ ಪ್ರಮುಖ ಬೀದಿ ಮೂಲಕ ಮೆರವಣಿಗೆಯೊಂದಿಗೆ ಅಸಂಖ್ಯಾತ ಭಕ್ತಾಧಿಗಳೊಂದಿಗೆ ಭೀಮಾನದಿಗೆ ಕೊಂಡೊಯ್ದು ಗಂಗಾಸ್ನಾನ ವಿಶೇಷ ಪೂಜೆ ಪಲ್ಲಕ್ಕಿಯನ್ನು ಊವಿನ ಅಲಂಕಾರದೊಂದಿಗೆ ಪುನಃ ಮೂಲ ಸ್ಥಾನಕ್ಕೆ ಆಗಮಿಸಿತು.
ಸಂಜೆ ನಗರ ಪ್ರವೇಶಿಸುತ್ತಿದ್ದಂತೆ ಮುಖ್ಯ ಬೀದಿಯಲ್ಲಿ ಭವ್ಯ ಮೆರವಣಿಗೆ ಭಕ್ತಾಧಿಗಳಿಂದ ಕಾಯಿ, ಕರ್ಪೂರ ಹೂಗಳನ್ನು ಅರ್ಪಿಸಿ ಶ್ರೀದೇವರ ದರ್ಶನ ಪಡೆದರು. ರಾತ್ರಿ ಭಜನೆ ವ್ಯವಸ್ಥೆ ಮಾಡಲಾಗಿತ್ತು. ಮರು ದಿನ ಡಿ.28 ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಧ್ಯಾಹ್ನ ಜಂಗಿ ಕುಸ್ತಿ ನಡೆಯಲಿವೆ ಎಂದು ಭಕ್ತ ಮಂಡಳಿ ತಿಳಿಸಿದೆ.
ವಿಜೇತ ಕುಸ್ತಿ ಪಟುಗಳಿಗೆ ಬಹುಮಾನ ನೀಡಲಾಗುತ್ತಿದೆ. ಉತ್ಸವ ಅಂಗವಾಗಿ ಸಕಲ ಭಕ್ತರಿಗೆ ಸೇವಾ ಸಮಿತಿವತಿಯಿಂದ ಪ್ರಸಾದದ ವ್ಯವಸ್ಥೆ ಕಲ್ಪಿಸಲಾದೆ. ಉತ್ಸವ ಅಂಗವಾಗಿ ಗುತ್ತಿಪೇಠೆಯಲ್ಲಿರುವ ದೇವಸ್ಥಾನಕ್ಕೆ ಹೋಗುವ ಮೋಚಿಗಡ್ಡಾ ಹತ್ತಿರದಲ್ಲಿ ಪ್ರವೇಶ ದ್ವಾರ ನಿರ್ಮಿಸಿದ್ದು, ಉತ್ಸವಕ್ಕೆ ಮೆರಗು ನೀಡುತ್ತಿದೆ.