ನಿಜಸುಖಿ ಶರಣ ಯಾರು ಗೊತ್ತೆ.?
ಶರಣರ ಆಚಾರ ವಿಚಾರಧಾರೆ ಅಳವಡಿಸಿಕೊಳ್ಳಿ
ಯಾದಗಿರಿ, ಶಹಾಪುರಃ 12 ನೇ ಶತಮಾನದ ಶಿವಶರಣರಲ್ಲಿ ಹಡಪದ ಹಪ್ಪಣ್ಣನವರು ತಮ್ಮ ಕಾಯಕ ನಿಷ್ಠೆಗೆ ಹೆಸರಾದವರು. ಅವರ ವಿಚಾರಧಾರೆಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ ಸಂಗಮೇಶ ಜಿಡಗೆ ಹೇಳಿದರು.
ಪಟ್ಟಣದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತವತಿಯಿಂದ ಆಯೋಜಿಸಿದ್ದ ಶಿವಶರಣ ಹಡಪದ ಹಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶರಣರು ನುಡಿದಂತೆ ನಡೆಯುವವರಾಗಿದ್ದರು. ನಡೆದಂತೆ ನುಡಿಯುತ್ತಿದ್ದರು. ಪ್ರಸ್ತುತ ಜನರು ವಚನ ನೀಡಿದಂತೆ ಬದುಕುತ್ತಿಲ್ಲ. ಶರಣರ ಆಚಾರ ವಿಚಾರಗಳು ಸಮಾಜದಲ್ಲಿನ ಕಲ್ಮಷವನ್ನು ತೊಳೆದು ನಿಸ್ವಾರ್ಥ ಬದುಕಿಗೆ ಸ್ಪೂರ್ತಿಯಾಗಿವೆ. ಕಾರಣ ಸರ್ವರೂ ಶರಣ ನಡೆಯಲ್ಲಿ ಜೀವನ ನಡೆಸಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ.
ಹನ್ನೆರಡನೇ ಶತಮಾನದ ಶರಣರ ಗಣದಲ್ಲಿ ಅಪ್ಪಣ್ಣರು ವಿಶೇಷ ವ್ಯಕ್ತಿತ್ವ ಹೊಂದಿದ ಶರಣರಾಗಿದ್ದರು. ಅವರ ಪ್ರೀತಿ, ವಿಶ್ವಾಸ ಪೂರ್ವದೊಂದಿಗೆ ಕಾಯಕದಲ್ಲಿ ನಿಷ್ಠೆಯನ್ನು ಹೊಂದಿದ್ದರು. ಕಂದಾಚಾರ, ಮೂಢನಂಬಿಕೆಯನ್ನು ಅಳಿಸಿ ಸಚ್ಛಾರಿತ್ರ್ಯದ ಬೆಳಕನ್ನು ಜನರಲ್ಲಿ ಮೂಡಿಸಿದ್ದರು ಎಂದರು.
ಶಿಕ್ಷಕ ಲಕ್ಷ್ಮಣ ಲಾಳಸೇರಿ ಶರಣರ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಸವಿತಾ ಸಮಾಜದ ಅಧ್ಯಕ್ಷ ಭಾಗಣ್ಣ ಹುಣಸಿಮರ, ಉಪಾಧ್ಯಕ್ಷ ಕಾಶಿನಾಥ ಹಡಪದ ಉಪಸ್ಥಿತರಿದ್ದರು. ಇದಕ್ಕೂ ಮುಂಚಿತವಾಗಿ ನಗರದ ಸಿಬಿ ಕಮಾನ್ದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ನಗರಸಭೆವರೆಗೆ ಶರಣರ ಭಾವಚಿತ್ರ ಮೆರವಣಿಗೆ ಜರುಗಿತು.
ಮೆರವಣಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸವಿತಾ ಸಮಾಜ ಬಾಂಧವರು, ಪ್ರಮುಖರು ಭಾಗವಹಿಸಿದ್ದರು. ಇದೇ ಪ್ರಥಮ ಬಾರಿಗೆ ರಾಜ್ಯ ಸರ್ಕಾರ ಹಡಪ ಹಪ್ಪಣ್ಣರ ಜಯಂತ್ಯುತ್ಸವ ಆಚರಣೆಗೆ ಅಸ್ತು ನೀಡಿರುವದನ್ನು ಸಮಾಜದ ಗಣ್ಯರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದರು.
ನಿಜ ಸುಖಿ ಶರಣ ಅಪ್ಪಣ್ಣ..
ಶರಣರಲ್ಲಿ ವಿಭಿನ್ನ ವಾತ್ಸಾಲ್ಯ ಪ್ರೀತಿ ಮಮತೆ ಅಷ್ಟೆ ಸತ್ಯವನ್ನು ನಂಬಿದ್ದ ಅಪ್ಪಣ್ಣ ಶರಣರು ನಿತ್ಯ ಕಾಯಕ ನಿಷ್ಠೆ ಜೊತೆಗೆ ಸತ್ಯವನ್ನೆ ಜೀವನ ುಸಿರಾಗಿಸಿಕೊಂಡು ಬದುಕಿದ್ದರು. ಸತ್ಯವನ್ನೆ ಹೇಳುತ್ತಿದ್ದರು. ಸುಳ್ಳು ಆಲಸ್ಯಕ್ಕು ಅವರ ಹತ್ತಿರ ಸುಳಿಯುತ್ತಿರಲಿಲ್ಲಿ. ನಿತ್ಯ ಕಾಯಕದಷ್ಟೆ ಸತ್ಯವನ್ನು ಮೈಗೂಡಿಸಿಕೊಂಡಿದ್ದವರು, ಸುಳ್ಳು ಹೇಳಿ ಅನಾಚಾರವನ್ನು ಮೈಮೇಲೆದುಕೊಳ್ಳುವದಕ್ಕಿಂತ ಸತ್ಯವನ್ನು ನುಡಿಯುವುದು ಲೇಸು. ಸತ್ಯ ಹೇಳಿದರೆ ಮನಸ್ಸು ಶಾಂತಿ, ತೃಪ್ತಿ ಹೊಂದಿರುತ್ತದೆ.
ಎಂಬ ಅವರ ಸತ್ಯವಾದವನ್ನೆ ಇಂದು ಅವರನ್ನು ನಿಜ ಹೇಳಿ ಸುಖಿಸುವ ಜೀವಿಸುವ ಶರಣ ಎಂದು ವ್ಯಾಕ್ಯಾನಿಸಲಾಗುತ್ತಿದೆ. ಆ ಕಾರಣಕ್ಕೆ ನಿಜಸುಖಿ ಶರಣ ಎಂದು ಅಪ್ಪಣ್ಣರನ್ನು ಸಂಬೋಧಿಸಲಾಗುತ್ತಿದೆ ಎನ್ನಲಾಗಿದೆ.