ಶಹಾಪುರಃ ವೀರಶೈವ ರುದ್ರಭೂಮಿ ಈಗ ಅಲ್ಪಸಂಖ್ಯಾತರ ಹೆಸರಿಗೆಃ ಹಳಿಸಗರ ವೀರಶೈವ ಸಮಾಜ ಆಕ್ರೋಶ
ಹಳಿಸಗರ ವೀರಶೈವ ರುದ್ರಭೂಮಿ ಜಾಗ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹೆಸರಿಗೆ ನಮೂದು ಸರಿಪಡಿಸಲು ನಾಗರಿಕರ ಆಗ್ರಹ
ಪಹಣಿಯಲ್ಲಿ ಅಲ್ಪಸಂಖ್ಯಾತರ ಇಲಾಕೆ ಹೆಸರು ಸೇರ್ಪಡೆಃ ವೀರಶೈವ ಸಮಾಜ ದಿಗ್ಭ್ರಮೆ
ವೀರಶೈವ ರುದ್ರಭೂಮಿ ಈಗ ಅಲ್ಪಸಂಖ್ಯಾತರ ಹೆಸರಿಗೆಃ ವೀರಶೈವ ಸಮಾಜ ಆಕ್ರೋಶ
ವಿವಿ ಡೆಸ್ಕ್
ಯಾದಗಿರಿ, ಶಹಾಪುರಃ ಇಲ್ಲಿನ ಹಳಿಸಗರ ಭಾಗದಲ್ಲಿರುವ ವೀರಶೈವ ರುದ್ರಭೂಮಿ 20 ಗುಂಟೆ ಜಮೀನು ಹಠಾತ್ತನೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹೆಸರಿಗೆ ಮಾಡಿರುವದು ದಿಗ್ಭ್ರಮೆಯಾಗಿದೆ. ಕೂಡಲೆ ಜಿಲ್ಲಾಧಿಕಾರಿಗಳು ಇದನ್ನು ಈ ಮೊದಲಿನಂತೆ ವೀರಶೈವ ರುದ್ರಭೂಮಿಯಂತೆ ನಮೂದಿಸಬೇಕೆಂದು ಆಗ್ರಹಿಸಿ ಇಲ್ಲಿನ ವೀರಶೈವ ಲಿಂಗಾಯತ ಸಮುದಾಯ ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು.
ಹಳಿಸಗರ ಸೀಮಾಂತರದಲ್ಲಿ ಬರುವ ಸರ್ವೆ ನಂಬರ 148 ರ 20 ಗುಂಟೆ ಜಮೀನು ವೀರಶೈವ ರುದ್ರಭೂಮಿಯಾಗಿದ್ದು, ಕಳೆದ 50 ವರ್ಷಗಳಿಂದ ಶವ ಸಂಸ್ಕಾರ ಮಾಡುತ್ತಾ ಬರಲಾಗಿದೆ. ಆದರೆ ಇದೀಗ ಹಠಾತ್ತನೆ ಪಹಣಿ ಬದಲಾಗಿದ್ದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಎಂದು ನಮೂದಿಸಿರುವದು ಬೆಳಕಿಗೆ ಬಂದಿದೆ. ಸಮೀಪದ ದರ್ಗಾದ ಅಲ್ಪಸಂಖ್ಯಾತ ಜನರು ವೀರಶೈವ ರುದ್ರಭೂಮಿ ಯನ್ನು ಇದೀಗ ತಮ್ಮದೆಂದು ಹೇಳುತ್ತಿದ್ದು,ಪಹಣಿಯ ಬದಲಾಗಿರುವದನ್ನು ತೋರಿಸುತ್ತಿದ್ದಾರೆ. ಅದ್ಹೇಗೆ ಸಾಧ್ಯವಿದು. ಕಳೆದ ಶತಮಾನದಿಂದ ಶವ ಸಂಸ್ಕಾರವನ್ನು ಇದೇ ಜಾಗದಲ್ಲಿ ಮಾಡುತ್ತು ಬರುತ್ತಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ
ಪ್ರಮುಖರಾದ ದೇಸಾಯಪ್ಪ ದೇಸಾಯಿ ಹಳಿಸಗರ, ಬಸವರಾಜ ದೇಸಾಯಿ, ಬಿ.ಜಿ. ದೇಸಾಯಿ ಹಳಿಸಗರ ಮತ್ತು ಚಂದ್ರಶೇಖರ ದೇಸಾಯಿ ಸೇರಿದಂತೆ ಇತರರಿದ್ದರು.




