ಪ್ರಮುಖ ಸುದ್ದಿ
ಹಮ್ಜಾ ಓಸಾಮಾ ಬಿನ್ ಲಾಡೆನ್ ಹತ್ಯೆ
ಓಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಸಾವು
ವಿನಯವಾಣಿ ಡೆಸ್ಕ್ಃ ಪಾಕಿಸ್ತಾನ – ಅಫ್ಘಾನಿಸ್ತಾನ ಗಡಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ಲಾಡೆನ್ ಮಗ ಹಮ್ಜಾ ಓಸಾಮಾ ಬಿನ್‌ಲಾಡೆನ್ ಸಾವನ್ನಪ್ಪಿದ್ದಾನೆ ಎಂದು ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಖಚಿತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಓಸಾಮ ಬಿನ್ ಲಾಡೆನ್ ಮೂರನೇಯ ಹೆಂಡತಿಯ ಮಗ ಮೃತ ಹಮ್ಜಾ ಬಿನ್‌ಲಾಡೆನ್ ಆಗಿದ್ದು, ಈತ 30 ವರ್ಷದ ಪ್ರಾಯದವನಾಗಿದ್ದ ಎನ್ನಲಾಗಿದೆ.
ಅಮೇರಿಕಾದ ವಿದೇಶಾಂಗ ಇಲಾಖೆ ಹಮ್ಜಾ ಬಿನ್‌ಲಾಡೆನ್ ನನ್ನು ಹುಡುಕಿ ಕೊಟ್ಟವರಿಗೆ 1 ಮಿಲಿಯನ್ ಹಣ ಬಹುಮಾನವಾಗಿ ನೀಡುವುದಾಗಿ ಫೆಬ್ರವರಿಯಲ್ಲಿ ಘೋಷಣೆ ಮಾಡಿತ್ತು ಎನ್ನಲಾಗಿದೆ.