ಪ್ರಮುಖ ಸುದ್ದಿ
ಸಿಎಂ ಆಗಿ ಮುಂದುವರೆಯುವ ನೈತಿಕತೆ BSY ಗಿದೆಯೇ.?
ಬೆಂಗಳೂರಃ ರಾಜ್ಯದ ಜನತೆ ಬಿಜೆಪಿ ಮತ್ತು ಜೆಡಿಎಸ್ ಪರವಾಗಿ ಇಲ್ಲ. ಇದನ್ನು ತಿಳಿದ ಅವರು ಹಣ ಹೆಂಡ ಹಂಚಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊರಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ 30 ಸಾವಿರ ಸೀರೆಗಳು ಸಿಕ್ಕರು ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಲಿಲ್ಲ. ಕ್ಷೇತ್ರಗಳಲಿ ಹಣ ಹಂಚಿಕೆ ಮಾಡುತ್ತಿರುವದು ತಿಳಿದರೂ ಸಹ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.
ತಮ್ಮದೇ ಸರ್ಕಾರ ಇರುವ ಕಾರಣ, ಚುನಾವಣೆಯನ್ನು ಹಣದಿಂದ ಗೆಲ್ಲಲು ಮುಂದಾಗಿದ್ದಾರೆ. ಹೀಗಾಗಿ ಸಿಎಂ ಆಗಿ ಮುಂದುವರೆಯುವ ಯಾವ ನೈತಿಕತೆ ಯಡಿಯೂರಪ್ಪನವರಿಗಿದೆ ಹೇಳಿ ಎಂದು ಅವರು ಪ್ರಶ್ನಿಸಿದ್ದಾರೆ.