ಹನುಮ ಜಯಂತಿ, ಭಕ್ತರು ಫುಲ್ ಬ್ಯುಸಿ.!
ಶಹಾಪುರಃ ಹನುಮ ಜಯಂತಿ, B.GUDI ಭಕ್ತರು ಫುಲ್ ಬ್ಯುಸಿ.!
ಯಾದಗಿರಿಃ ಇಂದು ಹನುಮ ಜಯಂತಿ ಪ್ರಯುಕ್ತ ಜಿಲ್ಲೆ ಸೇರಿದಂತೆ ಶಹಾಪುರ ತಾಲೂಕಿನ ಭೀಮರಾಯನ ಗುಡಿ ಹಾಗೂ ಹಲವು ಹನುಮ ಮಂದಿರಗಳಿಗೆ ಭಕ್ತರು ಬೆಳಗ್ಗೆಯಿಂದಲೇ ತೆರಳಿ ನೈವೇದ್ಯ, ಹೂ-ಕಾಯಿ ಅರ್ಪಿಸಿ ದರ್ಶನ ಪಡೆಯುವಲ್ಲಿ ಬ್ಯುಸಿಯಾಗಿದ್ದಾರೆ.
ಜಿಲ್ಲಾದ್ಯಂತ ಹನುಮ ಭಕ್ತರು ತಮ್ಮ ಇಷ್ಟದ ಹನುಮ ಮಂದಿರಕ್ಕೆ ತೆರಳಿ ವಿಳೇದ್ ಎಲೆ ಪೂಜೆ, ಹೂ-ಹಾರ, ತುರಾಯಿ ಸೇರಿದಂತೆ ನೈವೇದ್ಯ, ಕಾಯಿ ಕರ್ಪೂರ ಸಮರ್ಪಿಸಿ ತಮ್ಮ ಇಷ್ಠಾರ್ಥ ಈಡೇರಿಕೆಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಸಾಮಾನ್ಯವಾಗಿದೆ.
ಹಲವಡೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ನಗರದ ಮಾರುತಿ ಮಂದಿರ, ಯಾದಗಿರಿಯ ವೇಂಕಟೇಶ್ವರ ದೇವಾಲಯ, ಸ್ಥಳೀಯ ರಾಯರ ಮಠದಲ್ಲಿನ ಹನುಮ ಮಂದಿರ, ಲಕ್ಷ್ಮೀ ನಗರ, ತಹಸೀಲ್ ಏರಿಯಾದ ಬಸವೇಶ್ವರ ನಗರ ಇತರಡೆ ದೇವಸ್ಥಾನಗಳಿಗೆ ಹನುಮ ಭಕ್ತರು ತೆರಳಿ ದರ್ಶನ ಪಡೆದರು.
ಪ್ರತಿ ಶನಿವಾರ ಹನುಮ ದೇವಾಲಯಕ್ಕೆ ಭಕ್ತರು ತೆರಳಿ ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. ಆದರೆ ಇಂದು ಹನುಮ ಜಯಂತಿ ಪ್ರಯುಕ್ತ ಶುಕ್ರವಾರವು ಭಕ್ತಾಧಿಗಳು ಹನುಮ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಸಗರನಾಡಿನ ಹನುಮ ದೇವಾಲಯಗಳಲ್ಲಿ ಹನುಮ ಜಯಂತಿ ಆಚರಣೆಗೆ ಅಷ್ಟೇನು ಪ್ರಾತಿನಿಧ್ಯತೆ ನೀಡುವುದಿಲ್ಲವಾದರೂ ಭಕ್ತಾಧಿಗಳು ವಿಶೇಷವಾಗಿ ದೇವಾಲಯಕ್ಕೆ ತೆರಳುತಿದ್ದು ದರ್ಶನ ಪಡೆಯುತ್ತಿದ್ದಾರೆ.ಹ
ಹನುಮ ಜಯಂತಿ ನಿಮಿತ್ತ ಬೆಂಗಳೂರಿನ ಗಾಳಿ ಆಂಜನೇಯ ದೇವಸ್ಥಾನ, ಕಲಬುರ್ಗಿಯ ಕೋರಂಟಿ ಹನುಮಾನ ದೇವಸ್ಥಾನ ಮತ್ತು ತುಮಕೂರಿನ ಹನುಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದಿರುವುದನ್ನು ಭಕ್ತಾಧಿಗಳು ಗಮನಿಸಿದ್ದು ಸಗರನಾಡಿನಲ್ಲೂ ಹನುಮ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಹಲವಡೆ ಮಾತ್ರ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಕಂಡು ಬಂದಿದೆ.