ಅನಾಥಾಶ್ರಮದಲ್ಲಿ ಜನ್ಮದಿನಾಚರಣೆ, ಹಣ್ಣು ಹಂಪಲು ವಿತರಣೆ, ಧನ ಸಹಾಯ
ಅನಾಥಾಶ್ರಮದಲ್ಲಿ ಜನ್ಮದಿನಾಚರಣೆ ಆಚರಿಸಿಕೊಂಡ ಯುವಕ ಶಿವಶರಣ
ಶಹಾಪುರಃ ನಗರದ ಯುವ ಮುಖಂಡ ಶಿವಶರಣ ತಳವಾರ ಅವರು ಜನ್ಮ ದಿನಾಚರಣೆಯನ್ನು ಸ್ನೇಹಿತರೆಲ್ಲರೂ ಸೇರಿ ನಗರದ ಅನಾಥಾಶ್ರಮದ ಮಕ್ಕಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು.
ಆಶ್ರಮದ ಮಕ್ಕಳಿಗೆ ಕೇಕ್ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಅಲ್ಲದೆ ಆಶ್ರಮ ನಡೆಸುವ ಸಂಸ್ಥೆಗೆ ಕರಾದಸಂಸ ಮುಖಂಡ ಶಿವಕುಮಾರ ತಳವಾರ ಐದು ಸಾವಿರ ರೂ. ಮತ್ತು ರಾಮು ತಹಸಿಲ್ ಒಂದು ಸಾವಿರ ರೂ.ದೇಣಿಗೆ ನೀಡಿದರು.
ನಗರದಲ್ಲಿ ಇತ್ತೀಚೆಗೆ ಗೋ-ಶಾಲೆ ಮತ್ತು ಅನಾಥಾಶ್ರಮದ ಮಕ್ಕಳೊಂದಿಗೆ ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಪದ್ದತಿ ರೂಢಿಯಗುತ್ತಿದೆ. ಇದೊಂದು ಉತ್ತಮ ಸಂಸ್ಕಾರ ಎಂದರೆ ತಪ್ಪಿಲ್ಲ. ಇಂದಿನ ದಿನಮಾನಗಳಲ್ಲಿ ಯುವಕರು ಜನ್ಮ ದಿನಾಚರಣೆ ಎಂದರೆ, ಬಾರ್, ರಸ್ಟೋರೆಂಟ್ಗಳಲ್ಲಿ ಕುಡಿದು ಕುಪ್ಪಳಿಸುವ ಪಾರ್ಟಿ ಮಾಡುವುದು ನೋಡುತ್ತೇವೆ.
ಆದರೆ ನಗರದ ಯುವಕರು ವಿದೇಶಿ ಶೈಲಿಗೆ ಗುಡ್ ಬೈ ಹೇಳಿ, ಅನಾಥಾಶ್ರಮದ ಮಕ್ಕಳೊಂದಿಗೆ ಸಿಹಿ ಹಣ್ಣು ಹಂಪಲು ಹಂಚುವುದು ಸೇರಿದಂತೆ ಗೋ-ಶಾಲೆಯ ಗೋವು ಮಾತೆಗೆ ಬೆಲ್ಲ-ಬಾಳೆಹಣ್ಣು ಮತ್ತು ಹಸಿ ಮೇವು ವಿತರಿಸುವ ಮೂಲಕ ತಮ್ಮ ಮತ್ತು ಮಕ್ಕಳ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಮಾದರಿ ವಿಷಯ ಎಂಬುದು ವಿನಯವಾಣಿ ಅಂಬೋಣ.
ಈ ಜನ್ಮ ದಿನಾಚರಣೆ ಸಂದರ್ಭದಲ್ಲಿ ಭಾಗಪ್ಪ ಹಳಿಸಗರ, ಭೀಮಾಶಂಕರ ಹಳಿಸಗರ, ಮಂಜುನಾಥ ಚಟ್ಟಿ, ಮಕ್ತೂಮ್ ಪಟೇಲ್, ಪರಶುರಾಮ ಕಾಂಬ್ಳೆ, ಅಕ್ಷಯ ಹಸನಾಪುರ ಇತರರು ಹಾಜರಿದ್ದು ಜನ್ಮ ದಿನದ ಶುಭಾಶಯ ಕೋರಿದರು.