ಪತ್ರಕರ್ತರ ವಿರುದ್ಧ ಒಂಟಿ ಸಲಗದಂತೆ ಘರ್ಜಿಸಿದ ಕೆ.ಎಸ್. ಈಶ್ವರಪ್ಪ!
ಬೇರೆ ಉದ್ಯೋಗವಿಲ್ಲ, ಬರೀ ಬೆಂಕಿ ಹಚ್ಚೋ ಕೆಲಸ ಮಾಡ್ತೀರಾ?
ಬಾಗಲಕೋಟೆ: ಸ್ಥಳೀಯ ಬಿಜೆಪಿ ನಾಯಕರಲ್ಲಿನ ಭಿನ್ನಮತದಿಂದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಒಂಟಿಯಾಗಿದ್ದದ್ದು ಕಂಡು ಬಂದಿದೆ. ಈಶ್ವರಪ್ಪ ಜಿಲ್ಲೆಗೆ ಆಗಮಿಸಿದಾಗ ಜಿಲ್ಲಾ ಮುಖಂಡರು ಸ್ವಾಗತಿಸಲು ಬಾರದಿರುವುದು ಬಿಜೆಪಿಯಲ್ಲಿ ಎಲ್ಲವೂ ಸರಿಯಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಆದರೆ, ಒಬ್ಬಂಟಿಯಾಗಿರುವ ಬಗ್ಗೆ, ಬಿಜೆಪಿಯಲ್ಲಿನ ಭಿನ್ನಮತದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದ್ದಕ್ಕೆ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಪತ್ರಕರ್ತರ ವಿರುದ್ಧ ಕಿಡಿಕಾರಿದ ಘಟನೆ ನಡೆದಿದೆ.
ನಿಮಗಂತೂ ಬೇರೆ ಉದ್ಯೋಗವಿಲ್ಲ. ಬರೀ ಬೆಂಕಿ ಹಚ್ಚುವ ಕೆಲಸ ಮಾಡುತ್ತೀರಾ ಅನ್ನುವ ಮೂಲಕ ಕೆ.ಎಸ್.ಈಶ್ವರಪ್ಪ ಪತ್ರಕರ್ತರ ವಿರುದ್ಧ ಹರಿಹಾಯ್ದಿದ್ದಾರೆ. ಆರೋಗ್ಯ ಸಮಸ್ಯೆಯಿಂದಾಗಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ನಿಮಗೆ ಹೇಳಿದ್ದು ಅರ್ಥ ಆಗುತ್ತೆ ತಾನೆ, ಕನ್ನಡ ಸ್ಪಷ್ಟವಾಗಿ ಅರ್ಥ ಆಗುತ್ತೆ ಅಲ್ವಾ. ಮನೆ ಅಂದಾಗ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ. ನಮ್ಮ ಭಿನ್ನಮತ ನಾವೇ ಬಗೆಹರಿಸಿಕೊಳ್ಳುತ್ತೇವೆ. ನೀವು ನಿಮ್ಮ ಪತ್ನಿ ಜಗಳ ಆಡೋದೇ ಇಲ್ವಾ ಎಂದು ಕೇಳುತ್ತ ಒಂಟಿ ಸಲಗದಂತೆ ವಾಗ್ದಾಳಿ ನಡೆಸಿದ್ದಾರೆ.