ಪ್ರಮುಖ ಸುದ್ದಿ
ಬಾಂಬ್ ಸ್ಪೋಟದಲ್ಲಿ ಅಮರನಾದ ಯೋಧನಿಗೆ ಅಂತಿಮ ನಮನ!
ದಾವಣಗೆರೆ: ಮೂರು ದಿನಗಳ ಹಿಂದೆ ರಾಜಸ್ಥಾನದ ಸೇನಾ ತರಬೇತಿ ಸಮಯದಲ್ಲಿ ಬಾಂಬ್ ಸ್ಪೋಟಗೊಂಡಿದ್ದು ದಾವಣಗೆರೆ ಮೂಲದ ಯೋಧ ಜಾವೀದ್ ಕೊನೆಯುಸಿರೆಳೆದಿದ್ದರು. ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದ ಯೋಧ ಜಾವೇದ್ (22) ಪಾರ್ಥಿವ ಶರೀರ ಇಂದು ದಾವಣಗೆರೆ ಜಿಲ್ಲೆಯ ಹರಿಹರ ನಗರಕ್ಕೆ ತಲುಪಿದೆ. ಸಂಬಂಧಿ ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
10ಗಂಟೆಗೆ ಯೋಧನ ಪಾರ್ಥೀವ ಶರೀರದ ಮೆರವಣಿಗೆ, ಬಳಿಕ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ. ಯೋಧ ಜಾವೀದ್ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.