ಅಂಕಣಯೂತ್ ಐಕಾನ್

ಜನಸೇವೆಯಲ್ಲಿ ಕ್ರಿಯಾಶೀಲ- ವಿನಯವಾಣಿ ಯೂತ್ ಐಕಾನ್ ಉದ್ಯಮಿ ಮಣಿಕಂಠ

ಸೇವಾ ಮನೋಭಾವದ ಕ್ರಿಯಾಶೀಲ ಯುವ ಉದ್ಯಮಿ ಗುರುಬಸವ ಮಣಿಕಂಠ

 ✒ರಾಘವೇಂದ್ರ ಹಾರಣಗೇರಾ

ಒಂದು ಒಳ್ಳೆಯ ಯೋಚನೆ ಮಾಡಿ ಅದು ನಿಮ್ಮನ್ನು ಒಳ್ಳೆಯ ಕೆಲಸಕ್ಕೆ ಪ್ರೇರೇಪಿಸುತ್ತದೆ. ಒಂದು ಒಳ್ಳೆಯ ಕಾರ್ಯವನ್ನು ಕೈಗೊಳ್ಳಿರಿ ಅದು ನಿಮ್ಮನ್ನು ಒಂದು ಒಳ್ಳೆಯ ಅಭ್ಯಾಸಕ್ಕಿಳಿಸುತ್ತದೆ. ಒಂದು ಒಳ್ಳೆಯ ಅಭ್ಯಾಸವನ್ನು ರೂಪಿಸಿಕೊಳ್ಳಿ ಅದು ನಿಮ್ಮ ನಡತೆಗೆ ಪುಟಗೊಟ್ಟೀತು. ಒಳ್ಳೆಯ ನಡತೆಯಿಂದ ನಿಮ್ಮ ಅದೃಷ್ಟ ಕುದರಲೇಬೇಕು” ಎಂಬ ಸಮಾಜಶಾಸ್ತ್ರಜ್ಞ ಸ್ಯಾಮ್ಯುಯೆಲ್ ಸ್ಮೈಲ್ಸ ಅವರ ವಿಚಾರಗಳು ಅನೇಕ ಯುವ ಸಾಧಕರ ಕಾರ್ಯಚಟುವಟಿಕೆಗಳಿಗೆ ತುಂಬಾ ಅನ್ವಯಿಸುತ್ತದೆ. –

ಈ ಹಿನ್ನಲೆಯಲ್ಲಿ ಯುವ ಉದ್ಯಮಿಯಾಗಿ ಸೇವಾ ಮನೋಭಾವದಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತುಂಬಾ ಕ್ರೀಯಾಶೀಲತೆಯಿಂದ ತಮ್ಮನ್ನು ತೊಡಗಿಸಿಕೊಂಡಿರುವ ಗುರುಸವ ಮಣಿಕಂಠ ಅವರು ಒಳ್ಳೆಯ ರಚನಾತ್ಮಕ ಚಟುವಟಿಕೆಗಳ ಮೂಲಕ ಇವತ್ತಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

ವಿನಯವಾಣಿ ಯೂತ್ ಐಕಾನ್ ಗುರು ಮಣಿಕಂಠ

ಮೂಲತಃ ಬಳ್ಳಾರಿಯವರಾದ ಯುವ ಉದ್ಯಮಿ ಗುರುಬಸವ ಮಣಿಕಂಠ ಅವರು ಶ್ರೀ ಬಸವರಾಜ ಮತ್ತು ಶ್ರೀಮತಿ ಲಕ್ಷ್ಮೀದೇವಿ ಮಣಿಕಂಠ ದಂಪತಿಗಳ ಉದರದಲ್ಲಿ ಮೇ ೦೬- ೧೯೮೫ ರಲ್ಲಿ ಜನಿಸಿದರು. ಗುರುಬಸವ ಅವರು ಹುಟ್ಟಿದ ಎರಡು ತಿಂಗಳಲ್ಲಿ ತಾಯಿ ಲಕ್ಷ್ಮೀದೇವಿ ಅನಾರೋಗ್ಯದಿಂದ ನಿಧನರಾದರು.

ನಂತರ ಅಜ್ಜಿ ತಿಪ್ಪಮ್ಮ ಹಾಗೂ ತಂದೆಯ ಮಡಿಲಲ್ಲಿ ಬೆಳೆದರು. ಬಳ್ಳಾರಿ ವೀರಶೈವ ಶಿಕ್ಣಣ ಸಂಸ್ಥೆಯಲ್ಲಿ ಪದವಿ ಅದ್ಯಯನ ಮುಗಿಸಿ ಬೆಂಗಳೂರಿನಲ್ಲಿ ಎಮ್.ಬಿ.ಎ ಸ್ನಾತಕೋತ್ತರ ಪದವಿ ಅದ್ಯಯನ ಪೂರೈಸಿ ಬೆಂಗಳೂರಿನ ಎಕ್ಸಸ್ ಬ್ಯಾಂಕ್ ನಲ್ಲಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ತಂದೆ ಬಸವರಾಜ ಮಣಿಕಂಠ ಅವರು ಹತ್ತಿ ವ್ಯಾಪಾರ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಶಹಾಪುರ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತಿ ಬೆಳೆ ಹೆಚ್ಚು ಬೆಳೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಹತ್ತಿ ಕಾರ್ಖಾನೆ ಪ್ರಾರಂಭಿಸಿದರೆ ತುಂಬಾ ಅನುಕೂಲವಾಗುತ್ತದೆ ಎಂದು ಆಲೋಚಿಸಿ 2008 ರಲ್ಲಿ ಶಹಾಪುರ ತಾಲ್ಲೂಕಿನ ಹುಲ್ಕಲ್ ಗ್ರಾಮದ ಹತ್ತಿರ ಹತ್ತಿ ಕಾರ್ಖಾನೆ ಪ್ರಾರಂಬಿಸಿ ಹತ್ತಿ ಉದ್ಯಮಕ್ಕೆ ಚಾಲನೆ ನೀಡಿದರು.

ಎಮ್. ಬಿ.ಎ ಅದ್ಯಯನ ಪೂರೈಸಿರುವ ಗುರಬಸವ ಅವರು ತಂದೆಯ ಹತ್ತಿ ಉದ್ಯಮಕ್ಕೆ ತಮ್ಮ ಪದವಿಯ ಜ್ಞಾನ ಪೂರಕವಾಗುತ್ತದೆ ಎಂದು ಭಾವಿಸಿ ಬ್ಯಾಂಕಿನ ನೌಕರಿಯನ್ನು ತೊರೆದು ಹತ್ತಿ ಉದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. – ಸಮಾಜಕ್ಕೆ ಏನಾದರೂ ವಿಶಿಷ್ಟ ಸೇವೆ ಸಲ್ಲಿಸಬೇಕು, ಜನಸಾಮಾನ್ಯರ ಬದುಕಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕೆಂಬ ಕಳಕಳಿ ಹೊಂದಿದ್ದ ಗುರುಬಸವ ಮಣಿಕಂಠ ಅವರು ಮನುಷ್ಯ ಬದುಕಿನ ಅಪೂರ್ವ ಚೇತನವಾಗಿರುವ ತಾಯಿ ತಮ್ಮ ಬದುಕಿಲ್ಲಿ ಶಾಶ್ವತವಾಗಿ ನೆಲೆಸಿರಬೇಕು ಎಂದು ” ಶ್ರೀ ಮಣಿಕಂಠ ‘ಸ್ ಅಮ್ಮ ಚಾರಿಟೇಬಲ್ ಟ್ರಸ್ಟ ಸ್ಥಾಪಿಸಿ ಅದರ ಮೂಲಕ ಹಲವಾರು ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.

ಈ ಅಮ್ಮ ಟ್ರಸ್ಟಿನಡಿಯಲ್ಲಿ “ಅಮ್ಮ” ಕ್ಯಾಂಟೀನ್ ಪ್ರಾರಂಬಿಸಿ ಅತ್ಯಂತ ಕಡಿಮೆ ದರದಲ್ಲಿ ಅಂದರೆ 10 ರೂಪಾಯಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿ ಕಡಿಮೆ ದರದಲ್ಲಿ ಸಹಸ್ರಾರು ಜನಸಾಮಾನ್ಯರ, ಬಡವರ, ಕೂಲಿಕಾರ್ಮಿಕರ, ಬಡ ವಿದ್ಯಾರ್ಥಿಗಳ ಹಸಿವನ್ನು ನೀಗಿಸಲು ಶ್ರಮಿಸುತ್ತಿದ್ದಾರೆ.

ಕಳೆದ ವರ್ಷ ಬೇಸಿಗೆ ಬರ ಆಹಾರವಿಲ್ಲದೆ ಬೆಟ್ಟದ ಸಿದ್ಧಲಿಂಗೇಶ್ವರ ಗೋವುಗಳ ದುಸ್ಥಿತಿ ಕುರಿತು ಉಯವಾಣಿ ದಿನ ಪತ್ರಿಕೆಯಲ್ಲಿ ಪ್ರಕರಟವಾದ ಲೇಖನ‌ ನೋಡಿ ತಕ್ಷಣಕ್ಕೆ ಸ್ಪಂಧಿಸಿ, ತಾನೂ ಸೇರಿದಂತೆ ನಗರದ ಎಲ್ಲಾ ಕಾಟನ್ ಮಿಲ್ ಗಳಿಂದ ನೂರಾರು ಕ್ವಿಂಟಲ್ ಹತ್ತಿ ಬೀಜ ಮತ್ತು ಇಂಡಿ ಸಂಗ್ರಹಿಸಿ ನೀಡುವ ಮೂಲಕ ಜಾನುವಾರುಗಳ‌ ಜೀವಂತಿಕೆ ಪಡೆಯಲು ಕಾರಣರಾದರು.‌ ಸದಾ ಸಹಾಯ ಹಸ್ತ ಚಾಚುವ ಬಡವರ ಸಂಕಟಕ್ಕೆ ಮನ ಮಿಡಿಯುವ ಗುರು ಮಣಿಕಂಠ ನಿಜಕ್ಕೂ ಯುವ ಸಮೂಹಕ್ಕೆ ಮಾದರಿ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಓಟು ಹಾಕಿ ಉಚಿತ ಊಟ ಮಾಡಿ ಎಂದು ವಿನೂತನ ಕಾರ್ಯಕ್ರಮದ ಮೂಲಕ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ ಅತಿವೃಷ್ಠಿಯಿಂದ ಹಲವಾರು ರೀತಿಯಲ್ಲಿ ಹಾನಿಗೊಳಗಾದ ರೈತರಿಗೆ, ಕಾರ್ಮಿಕರಿಗೆ, ನಿರ್ಗತಿಕರಿಗೆ ತನು, ಮನ, ಧನದಿಂದ ಸಹಾಯ ಮಾಡಿದ್ದಾರೆ. ಮತ್ತು ಕರೋನಾ ಪರಿಣಾಮವಾಗಿ ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳನ್ನು, ತಲ್ಲಣಗಳನ್ನು ಅನುಭವಿಸುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಉಚಿತ ಊಟ, ಬಟ್ಟೆ ಕಿಟ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಬಡ ರೈತರಿಂದ ತರಕಾರಿ, ದವಸ ಧಾನ್ಯಗಳನ್ನು ಖರದಿಸಿ ನಿರ್ಗತಿಕರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಶಹಾಪುರದಲ್ಲಿ ಕರೊನಾ ಸೊಂಕು ನಿವಾರಕಾ ದ್ರಾವಣ ಸಿಂಪರಣೆಯ ಸುರಂಗ ಆರಂಭಿಸಿ ಕರೋನಾ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ವಿಶಾಲ ಹೃದಯಿಗಳಾದ ಗುರುಬಸವ ಮಣಿಕಂಠ ಅವರು ಕಷ್ಟದಲ್ಲಿರುವವರನ್ನು ಕಂಡರೆ ಅನುಕಂಪ, ಅವರಿಗೆ ಸಹಾಯ ಮಾಡುವ ಔದಾರ್ಯವನ್ನು ಹೊಂದಿದ್ದಾರೆ.

ಸದಾ ಹಸನ್ಮುಖಿಯಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು ಪರರ ನೋವಿಗೂ ಕಣ್ಣು ತುಂಬಿಕೊಳ್ಳುವ ಜೀವನ್ಮುಖಿ ಹೃದಯವಂತ. ತಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ತಂದೆ ಬಸವರಾಜ ಮಣಿಕಂಠ, ತಾಯಿ ಗಿರಿಜಮ್ಮ ಮತ್ತು ಪತ್ನಿ ವಿನಿತಾ ಅವರು ಸದಾ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುತ್ತಾರೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ.

ಸಮಾಜದಲ್ಲಿ ಒಳ್ಳೆಯದನ್ನು, ಒಳ್ಳೆಯ ಕಾರ್ಯಗಳನ್ನು ಗುರುತಿಸುವ ಮನೋಭಾನೆಗಳು ಹೆಚ್ಚಾಬೇಕು. ಇದು ಆರೋಗ್ಯಕರ ಸಮಾಜದ ಲಕ್ಷಣ. ಗುರು ಮಣಿಕಂಠ ಅವರ ಸಾಮಾಜಿಕ ಕಾರ್ಯಗಳಿಗೆ ನಾಡಿನ ಮಠ, ಮಾನ್ಯಗಳು, ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿವೆ. – ಯಾವುದೇ ಬಿಗುಮಾನಗಳಿಲ್ಲದ ಸರಳ ಸಜ್ಜನಿಕೆಯ ಸೌಜನ್ಯಮೂರ್ತಿ. ಸ್ಪಂದನಾಜೀವಿ, ಸ್ನೇಹಜೀವಿ, ಸೇವಾ ಮನೋಭಾವದ ಸಾಮಾಜಿಕ ಕಾಳಜಿವುಳ್ಳ, ಮಾನವೀಯ ಸಂವೇದನೆಯ ಯುವ ಉದ್ಯಮಿ ಗುರುಬಸವ ಮಣಿಕಂಠ ಅವರು ನಾಡಿನಲ್ಲಿ ಯಶಸ್ವೀ ಉದ್ಯಮಿಯಾಗಿ ಉದ್ಯಮ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸೋಣ.

ರಾಘವೇಂದ್ರ ಹಾರಣಗೇರಾ ಸಮಾಜಶಾಸ್ತ್ರ ಉಪನ್ಯಾಸಕರು ಹಾಗೂ ಲೇಖಕರು ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜು ಶಹಾಪುರ. ಜಿಲ್ಲೆ. ಯಾದಗಿರಿ. ಮೊ.ನಂ 9901559873

Related Articles

Leave a Reply

Your email address will not be published. Required fields are marked *

Back to top button