ವಿವಿಧ ಹುದ್ದೆಗಳ ನೇಮಕಾತಿಗೆ ತಡೆ ಬೇಡ- ಹಾರಣಗೇರಾ
ವಿವಿಧ ಹುದ್ದೆಗಳ ನೇಮಕಾತಿಗೆ ತಡೆ ಬೇಡ- ಹಾರಣಗೇರಾ
ಯಾದಗಿರಿ,ಶಹಾಪುರಃ ರಾಜ್ಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸರಕಾರ ತಡೆ ನೀಡಿರುವುದು ಸರಿಯಾದ ಕ್ರಮವಲ್ಲ. ಇದರಿಂದ ನೇಮಕಾತಿಗೆ ಬೇಕಾಗುವ ವಯಸ್ಸು ಮೀರುತ್ತಿರುವ ಬಹಳಷ್ಟು ಅಭ್ಯರ್ಥಿಗಳು ಹುದ್ದೆಯಿಂದ ವಂಚಿತರಾಗುತ್ತಾರೆ. ಹೀಗಾಗಿ ಸರ್ಕಾರ ಈ ಕೂಡಲೇ ನೇಮಕಾತಿ ತಡೆ ವಾಪಸ್ ಪಡೆಯಬೇಕೆಂದು ಇಲ್ಲಿನ ಬಾಪುಗೌಡ ದರ್ಶನಾಪುರ ಸ್ಮಾರಕ ಮಹಿಳಾ ಪದವಿ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ ಮನವಿ ಮಾಡಿದ್ದಾರೆ.
ಸಹಸ್ರಾರು ಅಭ್ಯರ್ಥಿಗಳು ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಹಾಮಾರಿ ಕೊರೊನಾ ಪರಿಣಾಮದಿಂದ ಆತಂಕ ಜೀವನವನ್ನು ಎದುರಿಸುತ್ತಿದ್ದು, ಹತ್ತಾರು ತಲ್ಲಣಗಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಆಹ್ವಾನಿಸಿರುವ ವಿವಿಧ ಹುದ್ದೆಗಳಿಗೆ ತಡೆ ನೀಡಿರುವ ಆದೇಶವನ್ನು ಹಿಂತೆಗೆದುಕೊಂಡು ಹುದ್ದೆಗಳ ನೇಮಕಾತಿಗೆ ಮರು ಆದೇಶ ಹೊರಡಿಸಿ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ.