ಹೊಸ ಮೋಟಾರ ಕಾಯ್ದೆ ವಿರೋಧಿಸಿ ವಕೀಲರ ಪ್ರತಿಭಟನೆ
ಶಹಾಪುರಃ ಮೋಟಾರ ಕಾಯ್ದೆ ತಿದ್ದುಪಡೆ ವಿರೋಧಿಸಿ ಪ್ರತಿಭಟನೆ
ಯಾದಗಿರಿ, ಶಹಾಪುರ: ಕೇಂದ್ರ ಸರ್ಕಾರ ನೂತನವಾಗಿ ಮೋಟಾರ ಕಾಯ್ದೆಯನ್ನು ತಿದ್ದುಪಡಿ ಮಾಡಿರುವದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಗುರುವಾರ ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪೂರೆ, ಹೊಸದಾಗಿ ಕಾಯ್ದೆಗೆ ತಿದ್ದುಪಡೆ ತಂದಿರುವುದರಿಂದ ಸಾರ್ವಜನಿಕರಿಗೆ ಕಕ್ಷಿದಾರರಿಗೆ ಹಾಗೂ ವಕೀಲರ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕೇವಲ ದಂಡನೆಯಿಂದ ಕಾನೂನು ಜಾರಿ ಮಾಡುವುದು ಸರಿಯಲ್ಲ. ಕಾನೂನು ಸಾರ್ವಜನಿಕರ ಒಳತಿಗಾಗಿ ಇರಬೇಕು.
ಸಂಚಾರಿ ನಿಯಮ ಉಲ್ಲಂಘನೆಯ ನೆಪದಲ್ಲಿ ವಾಹನ ಸವಾರರರಿಗೆ ಹೆಚ್ಚಿನ ದಂಡ ವಿಧಿಸುವುದು ಸರಿಯಾದ ಮಾರ್ಗವಲ್ಲ. ಅಧಿಕ ದಂಡ ವಸೂಲಿ ಭ್ರಷ್ಟಾಚಾರಕ್ಕೂ ಕಾರಣವಾಗುತ್ತದೆ. ಇದು ಜನ ವಿರೋಧಿ ಕಾಯ್ದೆಯಾಗಿದ್ದು, ಕೂಡಲೇ ತಿದ್ದುಪಡಿ ಕಾಯ್ದೆ ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ವಿನೋದ ನಾಯಕ, ಹಿರಿಯ ವಕೀಲರಾದ ಎಸ್.ಶೇಖರ, ಕೆ.ನಯ್ಯುಮ ಅಹ್ಮದ ತಿಮ್ಮಾಪುರಿ, ವಿಶ್ವನಾಥರಡ್ಡಿ ಕೊಡಮನಹಳ್ಳಿ, ಯೂಸೂಫ್ ಸಿದ್ದಕ್ಕಿ, ಸಯ್ಯದ್ ಇಬ್ರಾಹಿಂ ಜಮದಾರ, ಮಲ್ಕಪ್ಪ ಪಾಟೀಲ್, ಅಮರೇಶ ದೇಸಾಯಿ, ವಿಶ್ವನಾಥರಡ್ಡಿ ಸಾಹು, ಎಸ್.ಎಂ.ಸಜ್ಜನ, ಶ್ರೀಮಂತ ಕಂಚಿ, ನಬಿಸಾಬ್ ಹತ್ತಿಗೂಡೂರ, ಶರಣಪ್ಪ ಹೊಸ್ಮನಿ, ಮಲ್ಲಪ್ಪ ಪೂಜಾರಿ, ರಮೇಶ ಸೇಡಂಕರ್, ಅಮರೇಶ ಇಟಗಿ, ಶರಣಪ್ಪ ಪ್ಯಾಟಿ, ಸಿದ್ದು ಪಸ್ಪೂಲ್, ಮಲ್ಲಿಕಾರ್ಜುನ ಪೂಜಾರಿ ಹಾಲಬಾವಿ, ಹಯ್ಯಾಳಪ್ಪ ಸೇರಿದಂತೆ ಇತರರಿದ್ದರು.