ಪ್ರಮುಖ ಸುದ್ದಿ

ಶಿವನ ನೀರಿನಿಂದ ಬುರಾನುದ್ದೀನ ಸಾಬಗೆ ಅಭಿಷೇಕ

 

ಶಿವನ ಗುಂಡಾ ನೀರು ದರ್ಗಾಕ್ಕೆ ಅರ್ಪಣೆ

ಹೊಸೂರ ಗ್ರಾಮಸ್ಥರಿಂದ ಮಳೆಗಾಗಿ ಪ್ರಾರ್ಥನೆ

ಯಾದಗಿರಿ, ಶಹಾಪುರಃ ಮುಂಗಾರು ಹಂಗಾಮು ಮಳೆ ಬಾರದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಹಾಕಲಾಗಿದ್ದ ಬೆಳೆ ಚಿಗೊರೆಡೆಯುವ ಮುನ್ನವೇ ಬಾಡುತ್ತಿರವದನ್ನು ನೋಡಲಾಗದ ರೈತರು ಮಳೆಗಾಗಿ ತಾವುಗಳು ನಂಬಿದ್ದ ದೇವರ ಮೊರೆ ಹೋಗುತ್ತಿದ್ದಾರೆ.

ತಾಲೂಕಿನ ಹೊಸೂರ ಗ್ರಾಮದಲ್ಲಿ ಮಳೆಗಾಗಿ ಗ್ರಾಮಸ್ಥರು ಸಾಮೂಹಿಕವಾಗಿ ಸಾಂಪ್ರದಾಯದಂತೆ ಸಮೀಪದ ರೋಜಾ ಗ್ರಾಮದ ಬುರಾನುದ್ದೀನ ಸಾಬ ದರ್ಗಾಕ್ಕೆ ಸಾಮೂಹಿಕವಾಗಿ ನೀರಿನ ಕೊಡ ಹೊತ್ತು ದರ್ಗಾದ ಸಿಡಿಗಳಿಗೆ ಪ್ರತಿಯೊಬ್ಬರು ಐದು ಕೊಡ ನೀರು ಹೊತ್ತು ತಂದು ಸುರಿಯುವ ಮೂಲಕ ಮಳೆ ಕರುಣಿಸು ದೇವ ಎಂದು ಪ್ರಾರ್ಥನೆ ಸಲ್ಲಿಸಿದರು.

ಹೊಸೂರ ಗ್ರಾಮದ ಸಮೀಪದ ಎಂದಿಗೂ ಬತ್ತದ ಶಿವನ ಗುಂಡಾದಿಂದ ಸರ್ವರೂ ಪವಿತ್ರ ನೀರು ತೆಗೆದುಕೊಂಡು ಹೋಗಿ ಎರಡು ಕೀ.ಮೀ.ದೂರದ ರೋಜಾ ಗ್ರಾಮದ ಬುರಾನುದ್ದೀನ್ ಸಾಬ ದೇವರಿಗೆ ನೀರು ನೀಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಾಂಪ್ರದಾಯಿಕವಾಗಿ ಹೊಸೂರ ಗ್ರಾಮಸ್ಥರ ನಂಬಿಕೆಯಂತೆ ಮೊದಲಿನಿಂದಲೂ ಮಳೆ ಬಾರದಿದ್ದಾಗ ಇಲ್ಲಿನ ರೋಜಾ ಬುದಾನುದ್ದೀನ ದರ್ಗಾ ನೀರು ನೀಡು ವಾಡಿಕೆ ಇದೆಯಂತೆ ಅದರಂತೆ ಗ್ರಾಮಸ್ಥರು ಸುಮಾರ ಮನೆಗೊಬ್ಬರಂತೆ ಐದು ಬಾರಿ ನೀರು ನೀಡಿದ್ದಾರೆ.

ಕನಿಷ್ಟ 200 ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಅಂದಾಜು ಒಬ್ಬರು ಐದು ಕೊಡ ನೀರು ಅಂದ್ರೆ ಸುಮಾರು ಒಂದು ಸಾವಿರ ಕೊಡ ನೀರು ದರ್ಗಾದ ಸಿಡಿಗಳಿಗೆ ಹಾಕುವ ಮೂಲಕ ಸಾಂಪ್ರಾದಾಯಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಗ್ರಾಮ ಮುಖಂಡರಾದ ಗುರು ಅಂಗಡಿ, ಶರಣು, ಅಂಬಲಪ್ಪ, ಬುರಾನುದ್ದೀನ್ ಸೇರಿದಂತೆ ಇತರರು ಭಾಗವಹಿಸದ್ದರು.

ಶಿವನ ನೀರಿನಿಂದ ಬುರಾನುದ್ದೀನ ಸಾಬಗೆ ಅಭಿಷೇಕ

ಈ ಭಾಗದಲ್ಲಿ ಶಿವನ ಗುಂಡಾ ಪವಿತ್ರವಾದ ಜಲ ಬುಗ್ಗೆ ಇರುವ ತಾಣ, ಇದಕ್ಕೆ ಅದರದೇ ಆದ ಐತಿಹ್ಯವಿದೆ. ಇಲ್ಲಿ ಐದು ಜಲ ಬುಗ್ಗೆಗಳಿದ್ದು, ಸದಾ ನೀರು ಹರಿಯುತ್ತಿರುತ್ತದೆ. ಶುದ್ಧವಾದ, ತಿಳಿಯಾದ ಮತ್ತು ಸಿಹಿಯಾದ ನೀರು ದೊರೆಯುತ್ತವೆ. ಎಂದಿಗೂ ಬತ್ತದ ನೀರನ ಬುಗ್ಗೆಗಳಿವು.

ಮತ್ತು ಇನ್ನೂ ವಿಶೇಷ ಎಂದರೆ, ಶಹಾಪುರ ಬೆಟ್ಟದಲ್ಲಿರುವ ತಳವಿಲ್ಲದ, ಎಂದಿಗೂ ಬತ್ತದ ಮಂದಾಕಿನಿ ಪವಿತ್ರ ತೀರ್ಥದಲ್ಲಿ ಬೆಳ್ಳಿ ಬಟ್ಟಲು ಬಿಟ್ಟರೆ, ಅದು ಇದೇ ಶಿವನ ಗುಂಡಾದಲ್ಲಿ ತೇಲಿದೆ ಎಂಬ ಐತಿಹ್ಯವಿದೆ.

ಇದು ಹಿಂದೂ ಧಾರ್ಮಿಕ ಸ್ಥಳವು ಹೌದು. ಇಲ್ಲಿ ಸಂಕ್ರಾಂತಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಪುಣ್ಯ ಪ್ರಾಪ್ತಿಗಾಗಿ ಪವಿತ್ರ ಸ್ನಾನಕ್ಕಾಗಿ ಹಿಂದೂಗಳು ಶಿವನ ಗುಂಡಾಕ್ಕೆ ತೆರಳುವ ವಾಡಿಕೆ ಇದೆ.

ಇಂತಹ ಶಿವನ ಗುಂಡಾದ ನೀರಿನಿಂದ ಮುಸ್ಲಿಂ ಸಮುದಾಯದ ಬುರಾನುದ್ದೀನ್ ದರ್ಗಾ ಸಿಡಿಗಳಿಗೆ ನೀರು ನೀಡಿದ್ದಲ್ಲಿ ಮಳೆ ಬರುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಇಲ್ಲಿ ಯಾವುದೇ ಧರ್ಮ ಬೇಧವಿಲ್ಲದೆ ಭಾವೈಕ್ಯದಿಂದ ಈ ಕಾರ್ಯ ಮಾಡಲಾಗುತ್ತಿದೆ. ಇದೊಂದು ಅದ್ಭುತ ಕಾರ್ಯ ಎನ್ನಬಹುದು.

Related Articles

Leave a Reply

Your email address will not be published. Required fields are marked *

Back to top button