ಸಂತ್ರಸ್ಥರಿಗೆ ಶಹಾಪುರದ ಉಭಯ ಶ್ರೀಗಳಿಂದ ಪ್ರವಚನ
ಶಹಾಪುರಃ ಸಂತ್ರಸ್ಥರಿಗೆ ಬಿಸ್ಕೀಟ್, ಜ್ಯೂಸ್ ವಿತರಣೆ
ಯಾದಗಿರಿ,ಶಹಾಪುರಃ ಕೃಷ್ಣಾ ಪ್ರವಾಹದಿಂದ ಹೊಲ, ಬೆಳೆ, ಮನೆ ಮಠ ಜಾನುವಾರುಗಳನ್ನು ಕಳೆದುಕೊಂಡು ಚಿಂತೆಗೀಡಾದ ಸಂತ್ರಸ್ಥರಿಗೆ ಬರಿ ಊಟ, ವಸತಿ ಸೌಕರ್ಯವಲ್ಲದೆ. ಅವರಿಗೆ ಆಧ್ಯಾತ್ಮಿಕ ಪ್ರವಚನ ನೀಡುವ ಮೂಲಕ ಮನೋಧೈರ್ಯ ತುಂಬುವ ಕೆಲಸವನ್ನು ಶಹಾಪುರ ನಗರದ ಉಭಯಶ್ರೀಗಳಾದ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಮತ್ತು ಗುಂಬಳಾಪುರ ಮಠದ ಸಿದ್ಧೇಶ್ವರ ಶಿವಾಚಾರ್ಯರು ಪ್ರವಚನ ನೀಡುವ ಮೂಲಕ ಸಂತ್ರಸ್ಥರಲ್ಲಿ ಮನೋಬಲವನ್ನು ತುಂಬುವ ವಿನೂತನ ಕಾರ್ಯವನ್ನು ರವಿವಾರ ಸಂಜೆ ಮಾಡಿದರು.
ಕಳೆದ ಎರಡು ಮೂರು ದಿನದಿಂದ ಉಭಯಶ್ರೀಗಳು ಶಹಾಪುರದಲ್ಲಿ ಯುವ ಸಮೂಹವನ್ನೇ ತೆಗೆದುಕೊಂಡು ಸಂತ್ರಸ್ಥರಿಗೆ ಪರಿಹಾರ ನಿಧಿ ಸಂಗ್ರಹ, ಆಹಾರ ಧಾನ್ಯ ಸಂಗ್ರಹ ಸೇರಿದಂತೆ ಸೀರೆ, ಬಟ್ಟೆ ಬರೆ ವಿವಿಧ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದ್ದಾರೆ.
ಅಲ್ಲದೆ ಯುವ ಸಮೂಹವನ್ನು ಒಂದಡೆ ಸೇರಿಸಿ ಹತ್ತಿಗೂಡೂರ ಗಂಜಿ ಕೇಂದ್ರದಲ್ಲಿ ಸೇವಾ ಮನೋಭಾವದಿಂದ ಕೆಲಸ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಪ್ರಸ್ತುತ ಸಂಜೆ ಪ್ರವಚನದಲ್ಲಿ ಮಕ್ಕಳಿಗೆ ಜ್ಯೂಸ್, ಬಿಸ್ಕೀಟ್ ವಿತರಿಸಿ ಮಕ್ಕಳಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ. ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ.
ಮತ್ತೇ ನಾಳೆ ಬರುತ್ತೇವೆ. ಎಲ್ಲರೂ ನಿಮ್ಮೊಂದಿಗೆ ಇದ್ದೇವೆ. ಇದು ಪ್ರಕೃತಿ ವಿಕೋಪ ಬಂದ್ದನ್ನು ಹೇಗೆ ನಿಭಾಯಿಸಿಕೊಳ್ಳಬೇಕು. ಅದನ್ನು ಹೇಗೆ ಎದುರಿಸಬೇಕು. ಬದುಕು ಮತ್ತೇ ರೂಪಿಸಿಕೊಳ್ಳಬೇಕು. ಅಚಲದೊಂದಿಗೆ ಮುಂದೆ ಹೆಜ್ಜೆ ಹಾಕಬೇಕೆಂಬ ಹಲವಾರು ಕಥೆ ನಿದರ್ಶನಗಳ ಮೂಲಕ ಸಂತ್ರಸ್ಥರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಬಸವಂತ್ರರಡ್ಡಿ ಸಾಹು, ತಹಶೀಲ್ದಾರ ಸಂಗಮೇಶ ಜಿಡಗೆ, ಕೃಷಿ ಅಧಿಕಾರಿ ಉಪಸ್ಥಿತರಿದ್ದರು. ಶಹಾಪುರದ ಅಮ್ಮಾ ಕ್ಯಾಂಟೀನ್ ಮಾಲೀಕ ಗುರು ಮಣಿಕಂಠ, ಅರವಿಂದ ಉಪ್ಪಿನ್, ರವಿ ಮೋಟಗಿ, ಮೋದಿ ಕ್ಯಾಂಟೀನ್ ನ ಮಂಜುನಾಥ ಗಣಾಚಾರಿ, ಸಿದ್ದು ಆನೇಗುಂದಿ, ಬಸ್ಸು ಯಶ್ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಿರಿಯ ನಾಗರಿಕರು ಉಭಯಶ್ರೀಗಳ ಜೊತೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಇವರ ಸೇವೆಗೆ ನಿಜವಾಗಲೂ ವಿನಯವಾಣಿ ಹ್ಯಾಟ್ಸಪ್ ಹೇಳುತ್ತದೆ.