ಪ್ರಮುಖ ಸುದ್ದಿ
“ಲಿಂಬಾವಳಿ ಜತೆ ಬೇರೆ ರೀತಿಯ ಸಂಪರ್ಕ”- HDK ವ್ಯಂಗ್ಯ
ಹನಿಟ್ರ್ಯಾಪ್ ಪ್ರಕರಣದಲ್ಲಿ 9 ಜನ ಅರ್ನಹ ಶಾಸಕರು-ಎಚ್ಡಿಕೆ
ಬೆಳಗಾವಿಃ ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ನೀಡಿದ ಹೇಳಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದು, ಎಲ್ಲ ಶಾಸಕರು ಎಲ್ಲರ ಜೊತೆಯೂ ಸಂಪರ್ಕದಲ್ಲಿರುತ್ತಾರೆ. ಆದರೆ ಸದ್ಯ ಲಿಂಬಾವಳಿ ಜತೆಗೆ ಬೇರೆ ರೀತಿಯ ಸಂಕರ್ಪ ಇಟ್ಟುಕೊಳ್ಳದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.
ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೆಲ ಶಾಸಕರ ಹನಿಟ್ರ್ಯಾಪ್ ವಿಡಿಯೊ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ 9 ಜನ ಅನರ್ಹ ಶಾಸಕರೇ ಇದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರು ಅನರ್ಹ ಶಾಸಕರಲ್ಲ ಬದಲಾಗಿ ಒಂಬತ್ತು ಮಂದಿ ಇದ್ದಾರೆ. ಆದರೆ ಇದೇ ವಿಷಯದ ಮೇಲೆ ಕೀಳು ರಾಜಕೀಯ ಮಾಡಲ್ಲ ಎಂದರು.