ದೇವೇಗೌಡರಿಗೆ ಯಾರಿಗೆ, ಎಲ್ಲಿ, ಯಾವಾಗ ಬಾಂಬ್ ಹಾಕಬೇಕೆಂದು ಗೊತ್ತಿದೆ..!
ದೇವೇಗೌಡರಿಗೆ ಯಾರಿಗೆ, ಎಲ್ಲಿ, ಯಾವಾಗ ಬಾಂಬ್ ಹಾಕಬೇಕೆಂದು ಗೊತ್ತಿದೆ..!
ಬೆಂಗಳೂರಃ ವಿಧಾನಸಭೆ ಟಿಕೆಟ್ ಗಾಗಿ ನಾನೇ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಅರ್ಜಿ ಹಾಕಿಕೊಂಡು ಕುಳಿತಿದ್ದೇನೆ. ನನ್ನ ಪುತ್ರ ಪ್ರಜ್ವಲ್ ರೇವಣ್ಣನ ಟಿಕೆಟ್ ವಿಷಯ ನನಗೆ ಗೊತ್ತಿಲ್ಲ. ಪ್ರಜ್ವಲ್ ಜೆಡಿಎಸ್ ಪಕ್ಷದ ಕಾರ್ಯಕರ್ತ. ಪ್ರಜ್ವಲ್ ಗೆ ಟಿಕೆಟ್ ಕೊಡುವುದು , ಬಿಡುವುದು ವರಿಷ್ಠರಿಗೆ ಬಿಟ್ಟ ವಿಷಯವಾಗಿದೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಭವಾನಿ ರೇವಣ್ಣ ಅವರಿಗೂ ಈ ಹಿಂದೆ ಟಿಕೆಟ್ ಕೊಡುವುದಾಗಿ ಹೇಳಲಾಗಿತ್ತು ಆದರೆ ಕೊನೆಗೆ ಟಿಕೆಟ್ ಸಿಗಲಿಲ್ಲವಲ್ಲ ಅಂದಿದ್ದಾರೆ. ಅಂತೆಯೇ ಪ್ರಜ್ವಲ್ ರೇವಣ್ಣ ನೇರವಾಗಿ ತಾವೇ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಾರೆ. ನಾನೂ ಸಹ ದೇವೇಗೌಡರು ಇರೋವರೆಗೆ ಮಾತ್ರ ನಾನು ರಾಜಕೀಯ ಮಾಡುತ್ತೇನೆ ಅಂದಿದ್ದಾರೆ.
ಅಂತೆಯೇ ದೇವೇಗೌಡರಿಗೆ ಯಾರಿಗೆ , ಎಲ್ಲಿ, ಯಾವಾಗ ಬಾಂಬ್ ಹಾಕಬೇಕೆಂಬುದು ಗೊತ್ತಿದೆ. ದೇವೇಗೌಡರಿಗೆ ರಾಜಕೀಯ ಹೇಳಿಕೊಡಬೇಕಾ ಎಂದು ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಚಿವ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ರೇವಣ್ಣ ಅವರ ಈ ಹೇಳಿಕೆಗಳು ನಾನಾ ಅರ್ಥಗಳನ್ನು ಮೂಡಿಸಿವೆ. ಸಹಜವಾಗಿಯೇ ಮಾತನಾಡಿದ್ದಾರೆಯೇ ಅಥವಾ ದೇವೇಗೌಡರ ಕುಟುಂಬದಲ್ಲಿ ಚುನಾವಣೆ ಟಿಕೆಟ್ ವಿಷಯ ಅಸಮಧಾನ ಮೂಡಿಸಿದೆಯೇ ಎಂಬ ಅನುಮಾನಗಳನ್ನು ಮೂಡಿಸಿದೆ.